ಸಂತಾ- ನನ್ನಮ್ಮ ಹೇಳಿದ್ಲು, ಆಡಿನ ಹಾಲು ಕುಡಿದರೆ ಬುದ್ಧಿವಂತರಾಗಬಹುದಂತೆ..
ಫಂಟಾ- ನಿನ್ನಮ್ಮ ನಿನ್ನ ಫೂಲ್ ಮಾಡ್ತಿದಾಳೆ. ಆಡಿನ ಹಾಲು ಕುಡಿದವರು ಬುದ್ಧಿವಂತರಾಗೋದಿದ್ರೆ ಆಡಿನ ಮರಿಗಳೆಲ್ಲ ವಿಜ್ಞಾನಿಗಳಾಗಿ ಬಿಡ್ತಿದ್ವು!
---
ರೆಸ್ಟೊರೆಂಟ್ಗೆ ದಂಪತಿ ಊಟಕ್ಕೆ ಹೋಗಿದ್ದರು.
ಗಂಡ- ಸರಿ, ಊಟ ಶುರು ಮಾಡೋಣ್ವ?
ಹೆಂಡತಿ- ಮನೇಲಾದ್ರೆ ನೀವು ಊಟಕ್ಕೆ ಮೊದಲು ಪ್ರಾರ್ಥನೆ ಮಾಡ್ತಿದ್ರಲ್ಲ...?
ಗಂಡ- ಪರವಾಗಿಲ್ಲ, ಈ ರೆಸ್ಟೊರೆಂಟ್ನವನಿಗೆ ಅಡುಗೆ ಮಾಡೋದು ಚೆನ್ನಾಗಿ ಗೊತ್ತಿದೆ.