ಕೋಲ್ಯ ನಂಬರ್ರೊಂದನ್ನು ಡಯಲ್ ಮಾಡುತ್ತಾನೆ. ಒಬ್ಬ ಹುಡುಗಿಯ ದನಿ ಆ ಬದಿಯಿಂದ ಕೇಳಿಸುತ್ತದೆ.
ಕೋಲ್ಯ: ಹಲೋ...ನೀವ್ಯಾರು?
ಹುಡುಗಿ: ನಾನು ಸೀತಾ...
ಕೋಲ್ಯ: ಅರೆ ಇಸ್ಕಿ, ನಾನು ಅರಸೀಕೆರೆಗೆ ಫೋನ್ ಮಾಡಿದ್ರೆ, ಅಯೋಧ್ಯೆಗೆ ಹೋಗ್ಬಿಟ್ಟಿದೆಯಲ್ಲ. 'ಕ್ಷಮಿಸಿ ಮಾತೆ'!
---
ಹೆಂಡತಿ(ಶಾಯರಿ ಹೇಳುತ್ತಾ): ಬೆಳದಿಂಗಳು ಚಂದ್ರನಿಂದ ಮೂಡುತ್ತೆ, ತಾರೆಗಳಿಂದಲ್ಲ...ಪ್ರೀತಿ ಒಬ್ಬರ ಜೊತೆಗಾಗುತ್ತೆ ಹತ್ತಾರು ಜನರೊಂದಿಗಲ್ಲ!
ಗಂಡ: ಬೆಳದಿಂಗಳು ಚಂದ್ರನಿಂದಲೇ ಮೂಡಿದರೆ ತಾರೆಗಳ ಸ್ಥಿತಿಯೇನು...ಪ್ರೀತಿ ಒಬ್ಬರ ಜೊತೆಗೇ ಆದರೆ, ಉಳಿದವರ ಗತಿ ಏನು?!