ಸಂಪಾದಕೀಯ

ವಚನ ಪಾಲಿಸಿದ ಸಿಎಂ

Published On :

ಚುನಾವಣೆ ಮುಗಿದ ಅನಂತರ ವಿಧಾನ ಸಭೆಯ ಬಹುಮತೀಯ ಸದಸ್ಯರ ಬೆಂಬಲದ ಆಧಾರದ ಮೇಲೆ ಮುಖ್ಯಮಂತ್ರಿಯಾದ ನಾಯಕರಿಗೆ ಅಧಿಕಾರವನ್ನು ವಹಿಸಿಕೊಂಡ ದಿನವೇ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ವಚನ ಪಾಲಿಸುವ ಅವಕಾಶ ಸಿಗುವುದು ಅಪರೂಪ.
ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಅನಂತರದ ಸ್ವಲ್ಪ ಹೊತ್ತಿನಲ್ಲೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಡಜನರ ಪರವಾಗಿರುವ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿ, ಒಂದು ರೀತಿಯ ಹೆಗ್ಗಳಿಕೆಗೇ ಪಾತ್ರವಾಗಿದ್ದಾರೆ. ನಿಜ. ಅವರು ಹೊಸದಾಗಿ ಯಾವ ಯೋಜನೆಯನ್ನೂ ಪ್ರಕಟಿಸಿಲ್ಲ. ಈಗಾಗಲೇ ಜಾರಿಯಲ್ಲಿರುವ ವಿನಾಯಿತಿ ರಿಯಾಯಿತಿಗಳ ಪ್ರಮಾಣವನ್ನಷ್ಟೇ ಬದಲಾಯಿಸಿದ್ದರೂ, ಅದನ್ನು ಪ್ರಕಟಿಸಿದ ವೈಖರಿಯಲ್ಲಿ ಸಾಮಾಜಿಕ ನ್ಯಾಯ ವಿತರಣೆಯ ಬದ್ಧತೆಯ ಪ್ರದರ್ಶನವಾದಂತಿತ್ತು. ಸಿದ್ದರಾಮಯ್ಯ ಅವರು ಪ್ರಕಟಿಸಿದ ಏಳು ನಿರ್ಧಾರಗಳಿಂದ ಸರ್ಕಾರಕ್ಕೆ ಸುಮಾರು 4409 ಕೋಟಿ ರುಪಾಯಿಗಳ ಅಧಿಕ ವಾರ್ಷಿಕ ವೆಚ್ಚದ ಹೊರೆ ಬೀಳುವುದಾದರೂ ಅದರ ಪ್ರಯೋಜನ ಸಿಗುವುದು ಸುಮಾರು 1.38 ಕೋಟಿ ಬಡವರಿಗೆ. ಇಲ್ಲಿ ಯಾವ ನಿರ್ಧಾರವನ್ನು ಅಯ್ಯೋ ಇಷ್ಟೇನೇ ಎನ್ನುವಂತಿಲ್ಲ. ಕೇಜಿಗೊಂದು ರುಪಾಯಿ ದರದಲ್ಲಿ ಬಡ ಸಂಸಾರಗಳಿಗೆ ತಿಂಗಳಿಗೆ ಮೂವತ್ತು ಕೇಜಿ ಅಕ್ಕಿ ಪೂರೈಕೆ, ಬಡವರ ವಸತಿ ಯೋಜನೆಗಳಿಗೆ ನೆರವಿನ ಹೆಚ್ಚಳ, ಅಂಬೇಡ್ಕರ್ ನಿಗಮದಿಂದ ಪಡೆದ ಸಾಲ ಮನ್ನ, ಭಾಗ್ಯಜ್ಯೋತಿ ವಿದ್ಯುತ್ತಿಗೆ ಕೊಡಬೇಕಾದ ಹಣವನ್ನು ಬಡವರು ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಮಾಫಿ ಮಾಡುವುದು ಎಲ್ಲವೂ ಬಡಜನರ ಕಲ್ಯಾಣ ಕಾರ್ಯಕ್ರಮಗಳೇ. ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಇತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.