ಖರ್ಚು ಮಾಡಿದಷ್ಟು ಬೆಳೆವ ಸಂಪತ್ತು
ಬಳಸದೇ ಕೂಡಿಟ್ಟರೆ ಬಡ್ಡಿಯೂ ಇಲ್ಲ, ಠೇವಣಿಯೂ ಇಲ್ಲ
ಬುದ್ಧಿ ಇಲ್ಲದವ ಲದ್ದಿಗಿಂತ ಕಡೆ
ಇದು ಇಲ್ಲದಿದ್ದರೆ ನಿಮ್ಮನ್ನು 'ಬುದ್ಧಿಜೀವಿ' ಎನ್ನುವ ಅಪಾಯವಿದೆ
ಇದನ್ನು ಬಳಸುವ ವಿಚಾರದಲ್ಲಿ ಮಾತ್ರ ಭಾರತೀಯರು ಮಿತವ್ಯಯಿಗಳು
ಹುಟ್ಟುತ್ತ ಎಲ್ಲರೂ ಬುದ್ಧಿವಂತರೆ, ಶಾಲೆಗೆ ಸೇರಿದ ಬಳಿಕ ದಡ್ಡರಾಗುತ್ತಾರೆ
ಬುದ್ಧಿವಂತನಾದವ ತನಗೆ ಬುದ್ಧಿ ಇದೆ ಎಂದು ಹೇಳುವುದಿಲ್ಲ , ಇಲ್ಲದವ ಇಲ್ಲವೆಂದು ಹೇಳುವುದಿಲ್ಲ
ಬುದ್ಧಿ ಇದ್ದರೆ ತಲೆ ಇದೆ ಎನ್ನುತ್ತಾರೆ, ಇಲ್ಲದವನಿಗೆ ಹೆಡ್ಡ ಎನ್ನುತ್ತಾರೆ
ಬುದ್ಧಿ ಇದ್ದವರು ಸುದ್ದಿ ಆಗುತ್ತಾರೆ
ಬುದ್ಧಿವಂತ ವಿವಾಹಿತ ಎಂಬುದು ಪರಸ್ಪರ ವಿರುದ್ಧಾರ್ಥಕ
ಮಾನವ ಬುದ್ಧಿವಂತ ಜೀವಿ ಎಂಬುದು ಮಾನವನೇ ಸೃಷ್ಟಿಸಿದ ಸುಳ್ಳು ಮತ್ತು ಮೂಢನಂಬಿಕೆ
ಬುದ್ಧಿ ವಿಷಯದಲ್ಲಿ ಮಾತ್ರ ಯಾರೂ ಇಲ್ಲವೆನ್ನುವ ನಾಸ್ತಿಕರಲ್ಲ
ಬುದ್ಧಿ ಇಲ್ಲದ ವಿದ್ಯಾವಂತನಿಗಿಂತ ವಿದ್ಯೆ ಇಲ್ಲದ ಬುದ್ಧಿವಂತನೇ ವಾಸಿ
ಸ್ಥಿಮಿತದಲ್ಲಿದ್ದರೆ ಎಲ್ಲರಿಗೂ ಹಿತ
ಬಡವನ ಶಕ್ತಿ
ಇದನ್ನು ಅಮಾನತಿನಲ್ಲಿ ಇಡುವುದರಿಂದಲೇ ಅನಾಹುತಗಳಾಗುವುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com