ಸಂಪಾದಕೀಯ

ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಂಕಣ ಬೇಕಿದೆ

Published On :

ಬೈಟು ಕಾಫಿಯಲ್ಲಿ 'ಕವಿಮನೆ' ಸರಣಿಯಲ್ಲಿ ಕವಿಗಳನ್ನು ನೆನಪು ಮಾಡುವ ಲೇಖನಗಳು ನಿಜವಾಗಲೂ ಸ್ಮರಣೀಯ. ಆದರೆ 10ನೇ ಲೇಖನ 'ಪುರಾಣಿಕರ'ದ್ದು ಕಾಣೆಯಾದ ಆನಂದ-ಲೇಖನ ಅರ್ಧ ಪುಟದಲ್ಲಿ ಮಾಮೂಲಿನಂತೆ ಇದ್ದರೆ ಸಂಗ್ರಹಕ್ಕೆ ಚೆನ್ನಾಗಿತ್ತು. ಇನ್ನು ಮುಂದಾದರೂ ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ ನೀಡುವಿರೆಂದು ನನ್ನ ಅನಿಸಿಕೆ. ಒಟ್ಟಿನಲ್ಲಿ ಕನ್ನಡ ಜನರು ಕವಿಗಳನ್ನು -ಕವಿಗಳಿಗೆ ಸ್ಥಳ ಸೆಲೆಯಾದ ಮನೆ: ಪರಂಪರೆ ಮರೆಯದಿರಲೆಂದು ಮತ್ತು ನಮ್ಮ ಸಾಂಸ್ಕೃತಿಕ ಸಂಪತ್ತು ಕಳೆದು ಹೋಗದಿರಲೆಂದು ಜನ-ಸರ್ಕಾರಕ್ಕೆ ಮತ್ತು ಕನ್ನಡಪರ ಹೋರಾಟಗಾರರಿಗೆ ಎಚ್ಚರಿಸಿದೆ. ಏನೆಂದರೆ ಮಹಲಿಂಗ ರಂಗರ ಸಮಾಧಿ ದಾವಣಗೆರೆಯಲ್ಲಿ ಅನಾಥವಾಗಿದೆ. ಇಂಥ ಲೇಖನಗಳಿಂದ ಎದ್ದೇಳಲಿ ಕವಿ ಮನೆಗಳು-ಕನ್ನಡ ಮನಗಳಲ್ಲಿ.
-ವೇದಮೂರ್ತಿ ಮದ್ಯೇಯ, ಚಿತ್ರದುರ್ಗ (ಗಾರೆಹಟ್ಟಿ)

ಕನ್ನಡಪ್ರಭವು ಸುದ್ದಿ ವಿಶೇಷಗಳಿಂದ ಕೂಡಿರುವುದೇ ಅಲ್ಲದೆ ಓದುಗರ ಜ್ಞಾನವನ್ನು ಹೆಚ್ಚಿಸುವಂತಹ ಹಲವಾರು ಅಂಕಣಗಳನ್ನು ನೀಡುತ್ತಿರುವುದು ಶ್ಲಾಘನೀಯ. "ನೋಡ್ತಾ ಇರಿ, ಏನೇನ್ ಮಾಡ್ತೀವಿ" ಎನ್ನುತ್ತಿರುವ ಕನ್ನಡಪ್ರಭಕ್ಕೆ ಓದುಗನಾದ ನನ್ನದೊಂದು ಚಿಕ್ಕ ಸಲಹೆಯೇನೆಂದರೆ, ಪ್ರಜೆಗಳು ತಮ್ಮ ದೂರು ದುಮ್ಮಾನಗಳನ್ನು ಪ್ರಜಾಪ್ರತಿನಿಧಿಗಳ ಹತ್ತಿರ ಹೇಳಿಕೊಳ್ಳುವುದಕ್ಕೆ ಮೀಸಲಾದ ಒಂದು ಅಂಕಣವನ್ನು ಸೃಷ್ಟಿಸಿ, ಪ್ರಜೆಗಳಿಂದ ಬರುವಂತಹ ದೂರುಗಳನ್ನು ಸಂಬಂಧಪಟ್ಟ ಅಧಿಕಾರಿ ಅಥವಾ ಜನಪ್ರತಿನಿಧಿಗಳಿಗೆ ಪತ್ರಿಕೆ ಮುಖಾಂತರ ತಲುಪಿಸುವ ಕೆಲಸ ಮಾಡಿದರೆ, ಜನರ ಸಮಸ್ಯೆಗಳು ಬಹಿರಂಗವಾಗುವುದಲ್ಲದೆ ಸೂಕ್ತ ಸಲಹೆ ಅಥವಾ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿ ಪತ್ರಿಕೆಗೂ ಒಳ್ಳೆಯ ಹೆಸರು ಬರುತ್ತದೆ ಎಂಬುದು ನನ್ನ ಅನಿಸಿಕೆ. ಇಂತಹ ಒಂದು ಅಂಕಣಕ್ಕೆ "ಜನಪ್ರತಿನಿಧಿಗಳೇ ನೀವೇನು ಮಾಡ್ತೀರಿ?" ಎಂಬ ಶೀರ್ಷಿಕೆ ಕೊಟ್ಟರೆ, ಜನರ ಸಮಸ್ಯೆಗೆ ಏನು ಪರಿಹಾರ ಕೊಡ್ತೀರಾ? ಎಂಬ ಪ್ರಶ್ನೆಯನ್ನು ಜನಪ್ರತಿನಿಧಿಗಳಿಗೆ ಕೇಳಿದ ಹಾಗೆ ಆಗುತ್ತದೆ.
-ಗಂಗಾಚಾರಿ, ಬೆಂಗಳೂರು, ಮೊ. 97 31566 577

ನಾನು ಚಿಕ್ಕವನಿದ್ದಾಗ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ ಎಂಬ ಎರಡು ಪದಗಳನ್ನು ಕೇಳಿದ್ದೆ. ಭೂಪಟಗಳಲ್ಲಿ ನೋಡಿದ್ದೆ. ಓದಿ ತಿಳಿದುಕೊಂಡಿದ್ದೆ. "ದಕ್ಷಿಣದಲ್ಲೊಂದು ಪಾಕಿಸ್ತಾನ ಹುಟ್ಟಿಕೊಳ್ಳುವುದನ್ನು ತಡೆದವರನ್ನು ನೆಹರುವಾದಿ ಮನಃಸ್ಥಿತಿಯವರು ಮರೆತರು" ಆಗೀಗ "ತರುಣ್ ವಿಜಯ್‌" ಅವರ ಲೇಖನ ಓದಿ 'ದಕ್ಷಿಣದ ನಾವು ಇಂದು ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯ ಬದುಕು ನಡೆಸುತ್ತಿದ್ದೇವೆ" ಎಂದರೆ ಅದು ಪಟೇಲರ ಕಟು ನಿಲುವುಗಳು ಮತ್ತು ಅವರ ನಾಯಕತ್ವ ಎಂದು ತಿಳಿದ ಮೇಲೆ, ನಾವೆಲ್ಲರೂ ದಿನನಿತ್ಯ ಪಟೇಲರನ್ನು ಪೂಜಿಸಬೇಕೆಂಬ ಸತ್ಯದ ಅರಿವಾಯ್ತು.
-ಪಾಮರ ಚಡಗ. ಪಾಂಡೇಶ್ವರ, 944 804 6352

ಕನ್ನಡಪ್ರಭ ಬೇರೆಲ್ಲ ಪತ್ರಿಕೆಗಳಿಗಿಂತ ಭಿನ್ನವಾಗಿ ಯೋಚಿಸುತ್ತದೆ ಎಂಬುವುದನ್ನು "ಗುಟ್ಟೊಂದ ಹೇಳುವೆ" ಮೂಲಕ ತೋರಿಸಿಕೊಟ್ಟಿದೆ. ಹಿರಿಯರು ಹಿಂದೆ ಬಾಲ್ಯದಲ್ಲಿ ನಡೆಸಿದ ತುಂಟಾಟಗಳ ಬಗ್ಗೆ ಮನೆಯ ಹಿರಿಯರ್ಯಾರಾದರೂ ಇದ್ದಲ್ಲಿ ತಿಳಿಸಿರುತ್ತಾರೆ. ಯಾರೂ ಇಲ್ಲದಿದ್ದಲ್ಲಿ ಬೇರಾರಿಗೂ ಅದು ತಿಳಿಯುವುದೇ ಇಲ್ಲ! ಕನ್ನಡಪ್ರಭ ಹಿರಿಯರ ಕೆಲಸ ಮಾಡಿದೆ. ಹಳೆಯ ಬಾಲ್ಯದ ಚಿತ್ರಗಳೂ ಸಹ ಚೆನ್ನಾಗಿದೆ. ಇವರುಗಳ ಬಾಲ್ಯ ಇಂದಿನ ಮಕ್ಕಳಿಗೆ ಸ್ಫೂರ್ತಿಯಾಗುವಲ್ಲಿ ಯಾವುದೇ ಸಂಶಯವಿಲ್ಲ. ಮತ್ತೆ 'ಹೊಸ ರೂಪ, ಹೊಸ ಆಕಾರ, ಹೊಸ ಗಾತ್ರ' ನಿರೀಕ್ಷೆಯಲ್ಲಿದ್ದೇವೆ.
-ಕೊ.ಸು. ನರಸಿಂಹಮೂರ್ತಿ, ಮೈಸೂರು, ಮೊ. 99452- 71782

ಪಿ. ತ್ಯಾಗರಾಜ್‌ರ 'ಶಾದಿ ಭಾಗ್ಯ ಅಲ್ಲ, ಲೋಟ ತೋರಿಸಿ ಹಂಡೆ ಹೊಡಿತಾರೆ ಎಲ್ಲ! ಲೇಖನವು ಕಣ್ಣು ತೆರಸುವಂತಿದೆ. ಈ ಲೇಖನವನ್ನು ಎಲ್ಲೋ ಒಂದು ಮೂಲೆಯಲ್ಲಿ ಪ್ರಕಟಿಸದೆ, ಮುಖಪುಟದಲ್ಲೇ ಪ್ರಕಟಿಸಿದ ಸಂಪಾದಕೀಯ ಮಂಡಳಿಗೂ ಧನ್ಯವಾದಗಳು. ಅದು ಸರಿ, ನಿಮ್ಮ 6 4 ಲೆಕ್ಕಾಚಾರದಂತೆ, ನೀವು ನಮ್ಮ ಎಣಿಕೆಗಿಂತ ಹೆಚ್ಚನ್ನು ಇನ್ನೂ ಕೊಟ್ಟಿಲ್ಲ, ಕಾರಣ, ನಿಮ್ಮಿಂದ ನಮ್ಮ ಎಣಿಕೆ ಇನ್ನೂ ಬಹಳ ಇದೆ ಎಂಬುದನ್ನು ಮರೆಯದಿರಿ. ಸಂತುಷ್ಟರಾಗಿ ತೆಪ್ಪಗಾಗದಿರಿ.
-ಶಂಕರನಾರಾಯಣಭಟ್, ಮಾಡಗೇರಿ. ಹೊನ್ನಾವರ., ಮೊ. 9632 821920

ದಿ. 12ರ ಕ.ಪ್ರ. ಪತ್ರಿಕೆಯ ಭಟ್ಟರ ಲೇಖನದಲ್ಲಿ, ಒಗ್ಗರಣೆ ಸದ್ದು ಕೇಳಿಸಿತು. ದಾಲ್ ರೈಸ್ ರೆಡಿಯೂ ಆಯ್ತು. ಆದರೆ, ಅಡಿಗೆ ರುಚಿಯ ಬಗ್ಗೆ ವಿದೇಶಿಯರಿಂದ ಯಾವುದೇ ಪ್ರತಿಕ್ರಿಯೆಯ ಪ್ರಸ್ತಾಪ ಲೇಖನದಲ್ಲಿ ಇರಲಿಲ್ಲ. ಆದರೆ ಭಟ್ಟರ ಹಾಗೂ ಅವರ ಪತ್ರಕರ್ತರ ಬಳಗದ ಕೈಯಡಿಗೆ ಅಷ್ಟೊಂದು ಕೆಟ್ಟದಾಗಿತ್ತೆ? ದೇಶ, ವಿದೇಶ ಪ್ರದಕ್ಷಿಣೆ ಹಾಕುತ್ತಾ, ಕರಡಿ, ಹುಲಿ, ಗೊರಿಲ್ಲಾಗಳ ಹಿಂದೆ ಸುತ್ತುವುದನ್ನು ಸ್ವಲ್ಪ ಕಡಿಮೆ ಮಾಡಿ, ಭಟ್ಟರ್ಯಾಕೆ ಸದಾನಂದ ಮಯ್ಯರಿಂದ ಅಡಿಗೆ ತರಬೇತಿ ಪಡೆಯಬಾರದು? ಆಗ ಅವರ ಸ್ವಂತ ಅಡಿಗೆ ಮನೆಗೆ ಧಾರಾಳ ಪ್ರವೇಶವೂ ಸಿಗುತ್ತದೆ. ಜೊತೆಗೇ ಬಡ ವಿದೇಶೀಯರ ಹೊಟ್ಟೆಯ ಗೋಳಾಟವೂ ತಪ್ಪಬಹುದಲ್ಲವೇ?
-ಜಯಶ್ರೀ ಕೆ.,ಮೈಸೂರು

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!


ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.