ದೇವರು ಹೆಣ್ಣಿನಲ್ಲಿ ಅಂದ, ಗಂಡಿನಲ್ಲಿ ಆಸೆಯನ್ನು ಏಕಿಟ್ಟ?
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಪ್ರೀತಿಸಿ ಕೈಕೊಡೋರಿಗೆ ಮತ್ತು ಕೈಗೆ ಕೈ ಕೊಟ್ಟು ಪ್ರೀತಿಸು ಎನ್ನುವವರಿಗೂ ಏನು ವ್ಯತ್ಯಾಸ?
ಒಂದು ಪೋಸ್ಟ್ ಪೇಯ್ಡು, ಇನ್ನೊಂದು ಪ್ರೀಪೇಯ್ಡು!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ದೇವರು ಹೆಣ್ಣಿನಲ್ಲಿ ಅಂದ, ಗಂಡಿನಲ್ಲಿ ಆಸೆಯನ್ನು ಏಕಿಟ್ಟ?
ಕುಂಬಳಕಾಯಿಯನ್ನು ಬಳ್ಳಿಯಲ್ಲಿಟ್ಟು, ಮಾವಿನಕಾಯಿಯನ್ನು ಮರದಲ್ಲಿಟ್ಟನಲ್ಲ ಅದಕ್ಕೆ.
ನೇರಲಗುಡ್ಡ ಶಿವಕುಮಾರ್, ಸಿರಾ, 9480343742
ಪತಿ-ಪತ್ನಿ ವಿರಸಕ್ಕೂ ಪ್ರೇಮಿಗಳ ವಿರಸಕ್ಕೂ ಭಿನ್ನತೆ ಏನು?
ವಿಮಾನ ಪಂಕ್ಚರ್ ಆಗುವುದಕ್ಕೂ, ಬಸ್ ಪಂಕ್ಚರ್ ಆಗುವುದಕ್ಕೂ ಇರುವಷ್ಟೇ ವ್ಯತ್ಯಾಸ!
ಲಕ್ಷ್ಮೀಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ
ಅತ್ತೆಗೆ ಕೋಪ ಬಂದರೆ ಸೊಸೆಗೆ ಹೊಡೆದು ಸಮಾಧಾನ ಮಾಡ್ಕೋತಾಳೆ. ಆದ್ರೆ ಸೊಸೆಗೆ ಕೋಪ ಬಂದರೆ?
ಅತ್ತೆಯ ಮಗ ಇರೋದ್ಯಾಕೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
'ಕೇಳ್ರಪ್ಪೋ ಕೇಳಿ'ಗೆ ಎಷ್ಟು ಸಲ ಕೇಳಿದರೂ ಸುಸ್ತೇ ಆಗೋದಿಲ್ವಲ್ವಾ?
ಇದೊಂಥರ ಸುಸ್ತಾಗದ 'ಕೇಳಿ'
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

