ಅನಿಲ್ ಲಾಡು-ಪರಮೇಶ್ವರ ಲಾಡು ನಡುವಿನ ವ್ಯತ್ಯಾಸವೇನು?
ಪಿ.ಜೆ.ರಾಘವೇಂದ್ರ, ಕುವೆಂಪುನಗರ, ಮೈಸೂರು
ಅನಿಲ್ ಲಾಡು-ಪರಮೇಶ್ವರ ಲಾಡು ನಡುವಿನ ವ್ಯತ್ಯಾಸವೇನು?
ಅನಿಲ್ ಲಾಡು ಕಾಂಗ್ರೆಸ್ ಸರ್ಕಾರದ ಗಂಟಲಲ್ಲಿ ಸಿಲುಕಿಕೊಂಡಿದೆ, ಪರಮೇಶ್ವರ ಲಾಡು ಕಾರ್ಯಕರ್ತರ ಹೊಟ್ಟೆಯಲ್ಲಿ ಕರಗಿಹೋಗಿದೆ
ಫ್ಯಾಷನ್ ಡಿಸೈನರ್ ಮಧು, 9945737427
ನಿಮಗಾಗಿ ಏಳು ಸಮುದ್ರ ಬೇಕಾದರೂ ದಾಟಿ ಬರ್ತೀನಿ ಎನ್ನುತ್ತಿದ್ದ ಚೆಲುವೆ, ರಸ್ತೆಯನ್ನೂ ದಾಟದೇ ಓಡಿ ಹೋದಳಲ್ಲಾ?
ಸಮುದ್ರದಲ್ಲಿ ಬರುವ ತೆರೆಗಳಿಗಿಂತ ಹೆಚ್ಚು ವಾಹನಗಳು ರಸ್ತೆಯಲ್ಲಿ ಕಾಣಿಸಿರಬೇಕು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೇಮಿಗಳಿಗೂ ದಂಪತಿಗೂ ಇರುವ ವ್ಯತ್ಯಾಸವೇನು?
ಒಂದು ನೆಟ್ ಪ್ರಾಕ್ಟೀಸ್, ಇನ್ನೊಂದು ಮ್ಯಾಚ್!
ವಿ. ಹೇಮಂತಕುಮಾರ, 9035992900
ಚೆಲುವಿನ ಗಣಿಯಾದ ನನ್ನವಳು ಸಂಜೆ ವಾಕಿಂಗ್ ಬರಲು ನಿರಾಕರಿಸುತ್ತಾಳೆ ಏಕೆ ಸರ್?
ಗಣಿ ಕಳ್ಳರ ಭಯವಿರಬಹುದು!
ಕಾಳೀಹುಂಡಿ ಶಿವಕುಮಾರ
ಇಂದಿನ ಯಾಂತ್ರಿಕ ಜೀವನದಲ್ಲಿ ಆದರ್ಶಗಳು ಕರಗುತ್ತಿವೆಯಲ್ಲ ಭಟ್ರೆ?
ಗಣಕಮಾನವರ ಗುಣಾಕಾರದ ಗದ್ದಲದಲ್ಲಿ ಆದರ್ಶಗಳು ಕರಗದೇ ಇರುತ್ತವೆಯೇ?
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

