ಖಡ್ಗಕ್ಕಿಂತ ಹರಿತವಾದ ವಸ್ತು ಯಾವುದು?
ಸಿ. ನಾಗರಾಜ, ಅರದೋಟ್ಲು ಭದ್ರಾವತಿ
ಖಡ್ಗಕ್ಕಿಂತ ಹರಿತವಾದ ವಸ್ತು ಯಾವುದು?
ಹುಡುಗಿಯರ ಕಣ್ಣು!
ಅಶೋಕ್ ಕಾರೇಕುರ, 8892320820
ದೇವ್ರು-ದಿಂಡ್ರು ಮ್ಯಾಕೆ ನಂಬಿಕೆ ಇಲ್ಲ ಅಂದ ನಮ್ಮ ಸಿದ್ರಾಮಣ್ಣೋರು ಮೊನ್ನೆ ಗುಪ್ತವಾಗಿ ವರಮಹಾಲಕ್ಷ್ಮಿ ಹಬ್ಬ ಮಾಡವರಲ್ಲ?
ಅಧಿಕಾರ ಎಲ್ಲವನ್ನೂ ಮಾಡ್ಸುತ್ತೆ.
ತಲವಾಟ ಮಂಜುನಾಥ, ಸಾಗರ, 9480931611
ಪ್ರೀತ್ಸೋ ಮನಸ್ಸು ಒಟ್ಟಿಗೆ ಇದ್ರೆ ಸ್ವರ್ಗ ಸುಖ, ಬೇರೆ ಆದಾಗ?
ವಿರಹ ನೂರು ನೂರು ತರಹ.
ವಾದಿರಾಜ ಜಿ. ರಾಯ್ಕರ, ಬೆಂಗಳೂರು
ಮನೆಯೊಳಗಡೆ ಮಾತ್ರ ಇರಬೇಕಾದ 'ನೈಟಿ' ತರಕಾರಿ ಅಂಗಡಿ ತನಕ ಬರುತ್ತಲ್ಲ. ಹೀಗಾದ್ರೆ ಹೇಗೆ?
ಬಾರ್ನಲ್ಲಿ ಇರಬೇಕಾದ 'ನೈಂಟಿ' ಮನೆತನಕ ಬರುಬಹುದಾದರೆ, 'ನೈಟಿ' ತರಕಾರಿ ಅಂಗಡಿವರೆಗೆ ಬರದೇ ಇದ್ದೀತಾ?
ಫ್ಯಾಷನ್ ಡಿಸೈನರ್ ಮಧು, 9945737427
ಒಬ್ಬರೇ ಮಾತನಾಡಿಕೊಳ್ಳುವ ವಿಚಿತ್ರ 'ಹುಚ್ಚು' ಹಿಡಿಯುವುದು ಪ್ರೇಮಿಗಳಿಗೋ, ಮದುವೆ ಆದವರಿಗೋ?
ಮದುವೆ ಆದವರು ಒಬ್ಬರೇ ಮಾತನಾಡುವಾಗಲೂ ವಿಚಾರ ಮಾಡಬೇಕಾಗುತ್ತದೆ.
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

