ಸಂಪಾದಕೀಯ

ಗೋಡೆ ಒಡೆಯುವ-ಸಂಸ್ಕೃತಿ ನಿಲ್ಲುವುದು ಯಾವಾಗ?

Published On :

ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ, 9008741348
ಹೆಂಡತಿ ಕೊಡುವ ಮುತ್ತಿಗೂ ಪ್ರೇಯಸಿ ಕೊಡುವ ಮುತ್ತಿಗೂ ಇರುವ ವ್ಯತ್ಯಾಸವೇನು?
ಒಂದು ಬಿಟ್ಟಿ, ಇನ್ನೊಂದು ಅಪಾಯ ಕಟ್ಟಿಟ್ಟ ಬುತ್ತಿ!

ಪವನಕುಮಾರ ಕೆ.ವಿ., ಬಳ್ಳಾರಿ, 9900515957
ಪಕ್ಷ ನಿಷ್ಠೆ, ಪ್ರಾಮಾಣಿಕತೆ, ಪಕ್ಷಾಂತರ. ಈ ಮೂರು ಪದಗಳಲ್ಲಿ ರಾಜಕಾರಣಿ ಅತಿ ಹೆಚ್ಚು ಇಷ್ಟಪಡುವ ಪದ ಯಾವುದು?
ಇದೆಲ್ಲದಕ್ಕಿಂತಲೂ ಹೆಚ್ಚು ಇಷ್ಟಪಡುವ ಪದ ಅಧಿಕಾರ! ಅದರ ಮುಂದೆ ಈ ಮೂರೂ ಲೆಕ್ಕಕ್ಕಿಲ್ಲ.

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಗೋಡೆ ಒಡೆಯುವ-ಸಂಸ್ಕೃತಿ ನಿಲ್ಲುವುದು ಯಾವಾಗ?
ವಿಧಾನಸೌಧಕ್ಕೆ ಗೋಡೆಗಳೇ ಇಲ್ಲವಾದಾಗ!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಇಂದು ಗೋಡೆ ಒಡೆದವರು ಮುಂದೆ ಇಡೀ ಕಟ್ಟಡ ಕೆಡವುವದಿಲ್ಲವೇ?
ಇಡೀ ಕಟ್ಟಡ ಕೆಡವಿದರೆ ವಿವಾದ, ಒಂದೊಂದೇ ಗೋಡೆಗಳನ್ನು ಒಡೆಯುತ್ತ ಬಂದರೆ ಕೆಲಸ ಸರಾಗ!

ಪುಟ್ಟಸೋಮನಹಳ್ಳಿ ಗಾನಾಸುಮಾ, ಪಾಂಡವಪುರ, ಮಂಡ್ಯ
ಡಿಕೆಶಿಗೆ ಹೀರೇಮಠ ಬೆನ್ನುಬಿಡದ ಬೇತಾಳದಂತೆ ಕಾಡೋಕೆ ಪೂರ್ವಜನ್ಮದ ನಂಟಾ ಗುರು?
ಅಯ್ಯೋ ಈ ಜನ್ಮದ್ದೇ ಸಾಕಷ್ಟಿದೆ, ಪೂರ್ವಜನ್ಮದ್ಯಾವನಿಗೆ ಬೇಕು ಅಂದ್ರಂತೆ ಹಿರೇಮಠ್.

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.