ಶಾಸಕರ ವಿದೇಶ ಪ್ರವಾಸ ಉಪಯುಕ್ತವಾಗಲಿ
ಜನರ ಸಮಸ್ಯೆಗಳೇನು, ಕ್ಷೇತ್ರದ ಅಭಿವೃದ್ಧಿಗಾಗಿ ಯಾವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಯಲು ತಮ್ಮ ಕ್ಷೇತ್ರ ಪ್ರವಾಸ ಮಾಡುವುದನ್ನು ಬಿಟ್ಟು, ಇತ್ತೀಚೆಗೆ ಶಾಸಕರು ಅಧ್ಯಯನದ ಹೆಸರಿನಲ್ಲಿ (?) ಸರ್ಕಾರದ ಹಣದಲ್ಲಿ 'ವಿದೇಶ ಪ್ರವಾಸ' ಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ! ಹಿಂದೆ ರಾಜರು ತಮ್ಮ ರಾಜ್ಯದ ಜನರ ಯೋಗಕ್ಷೇವು ತಿಳಿಯಲು ಮಾರುವೇಷದಲ್ಲಿ ತಮ್ಮದೇ ರಾಜ್ಯದ ಪ್ರವಾಸ ಮಾಡುತ್ತಿದ್ದರಂತೆ. ಆದರೀಗ ಉಲ್ಟಾ ಆಗಿದೆ! ಹೋದ್ರೆ ಹೋಗಲಿ... ಎಷ್ಟೇ ಆಗ್ಲಿ ಅವರು ಜನನಾಯಕರು ಅಲ್ವಾ?! ಆದ್ರೆ, ಅಲ್ಲಿ ಹೋಗಿ ಅಲ್ಲಿನ ರಸ್ತೆಗಳು, ವಿದ್ಯುತ್ ವ್ಯವಸ್ಥೆ, ನೀರಾವರಿ, ಶಿಕ್ಷಣ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ದೂರಸಂಪರ್ಕ ವ್ಯವಸ್ಥೆ ಮುಂತಾದವುಗಳ ಬಗ್ಗೆ ಪ್ರಾಮಾಣಿಕ ಅಧ್ಯಯನ ನಡೆಸಿ, ಅಲ್ಲಿರುವ ಉತ್ತಮ ಅಂಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಪ್ರವಾಸಕ್ಕೆಂದು ಖರ್ಚು ಮಾಡಿದ ಹಣ 'ಹೊಳೆಯಲ್ಲಿ ಹುಣಿಸೆ ಹಣ್ಣು ಹಿಂಡಿದಂತಾಗುತ್ತದೆ'!
-ಬಸವನಗೌಡ ಹೆಬ್ಬಳಗೆರೆ.
ಹಳ್ಳಿಗಳೀಗ ವೃದ್ಧಾಶ್ರಮಗಳು!
ಗ್ರಾಮಾಂತರ ಪ್ರದೇಶದಲ್ಲಿನ ಯುವಕರಿಗೆ ಎಸ್ಸೆಸ್ಸೆಲ್ಸಿ ಪಾಸ್ ಅಥವಾ ಫೇಲಾಗಲೀ ತಲೆಯೇ ನಿಲ್ಲುವುದಿಲ್ಲ. ಪೋಷಕರ ಸ್ವಂತ ಜಮೀನುಗಳಲ್ಲಿಯೂ ಕೆಲಸ ಮಾಡಲು ಕೀಳರಿಮೆ. ಇನ್ನು ಪಿಯುಸಿ/ ಪದವಿ ಪಡೆದವರನ್ನಂತೂ ಕೇಳಲೇಬೇಕಿಲ್ಲ. ವಿದ್ಯಾವಂತರೆಲ್ಲರಿಗೂ ಸರ್ಕಾರಿ ಹುದ್ದೆ ಸಿಗುವುದು ದುರ್ಲಭ. ಹಾಗಾಗಿ ಇರುವ ಮಕ್ಕಳೆಲ್ಲಾ ಉದ್ಯೋಗ ಅರಸಿ ಪಟ್ಟಣ/ನಗರ ಪ್ರದೇಶಗಳಿಗೆ ಬಂದರೆ ವೃದ್ಧ ತಂದೆ/ತಾಯಿಯರ ಪಾಡೇನು? ಕೆಲಸ ಅರಸಿ ಬಂದ ಯುವಕರಿಗೆ ಕೆಲವು ಅಕುಶಲಕಾರ್ಮಿಕರಿಗೆ ಖಾಸಗಿ ಕಾರ್ಖಾನೆಗಳು/ ಕಂಪನಿಗಳು, 8-10 ಸಾವಿರ ಸಂಬಳ ನೀಡಬಹುದು. ಇದರಿಂದ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಜೀವನ ಸಾಗಿಸಲು ಸಾಧ್ಯವೇ? ನವಯುವಕರು ನಗರ ಜೀವನದ ವ್ಯಾಮೋಹ ಬಿಟ್ಟು, ಗ್ರಾಮಾಂತರ ಪ್ರದೇಶಗಳಲ್ಲಿಯೇ ಉಳಿದು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿದು ಸಾಕಷ್ಟು ಹಣ ಸಂಪಾದಿಸಬಹುದಲ್ಲಾ? ಊರು ತೊರೆದ ಮೇಲೆ ಪೋಷಕರ ಸ್ಥಿತಿ ಹದಗೆಟ್ಟು ಅಂತಹ ಮನೆಗಳು ವೃದ್ಧಾಶ್ರಮಗಳಾಗುವುದು ತಪ್ಪುವುದಿಲ್ಲ. ನಿರುದ್ಯೋಗಿ ಯುವಕರು ಗ್ರಾಮಾಂತರ ಪ್ರದೇಶಗಳಲ್ಲಿ ಸಮಾಜ ಸೇವೆ ಮಾಡುವುದರ ಮೂಲಕ ದೇಶ ಮುಂದುವರೆಸಬಹುದು.
-ಜೆ.ಆರ್. ಆದಿನಾರಾಯಣಮುನಿ, ಬೆಂಗಳೂರು
ಪ್ರತಿಕ್ರಿಯೆ
ನಾನು ನೈತಿಕ ಪೊಲೀಸ್ಗಿರಿ ವಿಚಾರದಲ್ಲಿ ಪಿಎಫ್ಐ ಅಥವಾ ಹಿಂದು ಸಂಘಟನೆಗಳ ಪರ ಯಾವತ್ತೂ ಮಾತನಾಡಿಲ್ಲ. ಆರೋಪಿಗಳ ಪರ ಪೊಲೀಸ್ ಠಾಣೆಗೆ ಯಾವುದೇ ಮೌಖಿಕ ಸೂಚನೆಯನ್ನೂ ನೀಡಿಲ್ಲ. ಹಾಗೇನಾದರೂ ಸಾಬೀತಾದಲ್ಲಿ ನನ್ನನ್ನು ಫಾಸಿಗೆ ಬೇಕಾದರೂ ಹಾಕಿಕೊಳ್ಳಲು ನಾನು ಸಿದ್ಧನಿದ್ದೇನೆ.
-ರಮಾನಾಥ್ ರೈ, ಉಸ್ತುವಾರಿ ಸಚಿವರು, ದ.ಕಿ. ಜಿಲ್ಲೆ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

