ಸಂಪಾದಕೀಯ

ಹಂಪಿ ಉತ್ಸವದ ಹೆಸರಲ್ಲಿ ಪ್ರಕೃತಿಯ ಹಾಳು ಬೇಡ

Published On :

ದಿ. 29.12.13ರ ಕ.ಪ್ರ.ದಲ್ಲಿ "ಹಂಪಿ ಉತ್ಸವದ ಹೆಸರಲ್ಲಿ ಹಾಳು ಮಾಡಿದ್ರು" ಎಂಬ ಶಿರೋನಾಮೆಯಲ್ಲಿ ಹಂಪಿ ಉತ್ಸವದ ಸಂದರ್ಭದಲ್ಲಿ ಅಲ್ಲಿಯ ಪ್ರಕೃತಿ ಸೌಂದರ್ಯ, ಪ್ರಾಣಿ, ಪಕ್ಷಿಗಳಿಗೆ ತೊಂದರೆ ತಂದೊಡ್ಡಿರುವ ತೊಂದರೆಯ ಬಗ್ಗೆ ಓದಿ ಬಹಳ ದುಃಖವಾಯಿತು. ಹಂಪಿ ಎಲ್ಲರ ತಾತ್ಸಾರಕ್ಕೆ ತುತ್ತಾಗಿ ಈಗಾಗಲೇ ಅದು ಹಾಳು ಹಂಪೆಯಾಗಿರುವುದರ ಜೊತೆಗೆ ಈ ಉತ್ಸವದ ಹೆಸರಲ್ಲಿ ಮತ್ತಷ್ಟು ಹಾಳಾಗುವುದನ್ನು ತಕ್ಷಣ ತಪ್ಪಿಸಬೇಕು. ಜೊತೆಗೆ ಈ ಉತ್ಸವ ನಡೆಸುವವರು ಎಲ್ಲಿ ಏನು ಕಾರ್ಯಕ್ರಮ ನಡೆಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಉತ್ಸವ ನಡೆಸಿದರೆ ಅದಕ್ಕೊಂದು ಅರ್ಥ, ಸಾರ್ಥಕತೆ ಬರುತ್ತದೆ ಅಲ್ಲವೇ? ಹಂಪಿ ಎಂದರೆ ಹರಿದಾಸರು ಮತ್ತು ಹರಿದಾಸರೆಂದರೆ ಹಂಪಿ. ಈ ವರ್ಷ ಹರಿದಾಸ ಶ್ರೇಷ್ಠ ಪುರಂದರದಾಸರ 450ನೇ ವರ್ಷದ ಪುಣ್ಯತಿಥಿ. ಅವರು ತಮ್ಮ ಅಂತಿಮ ಉಸಿರನ್ನೆಳೆದ ಸ್ಥಳವೂ ಪರಮ ಪವಿತ್ರ ಹಂಪಿ ಕ್ಷೇತ್ರವೇ. ಹಂಪಿ ಉತ್ಸವದ ವ್ಯವಸ್ಥಾಪಕರು ಇದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ವಿಶೇಷ ಒತ್ತು ಕೊಟ್ಟು ಈ ಉತ್ಸವ ನಡೆಸಿದರೆ ಅದೊಂದು ಚರಿತ್ರಾರ್ಹ ಉತ್ಸವವಾಗಿ ಉತ್ಸವಕ್ಕೆ ತುಂಬಾ ವಿಶೇಷತೆ ಸಹ ಬರುತ್ತದೆ. ಜೊತೆಗೆ ಹಂಪಿಯನ್ನಾಳಿದ ಚರಿತ್ರಾರ್ಹ ವ್ಯಕ್ತಿ ಶ್ರೀ ಕೃಷ್ಣದೇವರಾಯರು. ಅವರ ಮನೆ ದೇವರು ತಿರುಮಲೆಯ ಶ್ರೀನಿವಾಸ. ಹಂಪಿ ಉತ್ಸವದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಜರುಗಿಸಲಿ. ಇದು ಬಹಳ ಜನಪ್ರಿಯವಾಗಿ ಸಾಮಾನ್ಯ ಜನರಿಗೂ ಹಂಪಿ ಉತ್ಸವ ಸಂತೋಷ ತಂದು ಇದಕ್ಕೆ ಶೋಭೆ ಬರುತ್ತದೆ ಅಲ್ಲವೇ?
- ಎ.ಕೆ. ಅನಂತಮೂರ್ತಿ, ನಾಗಸಂದ್ರಬ್ಲಾಕ್, ಬೆಂಗಳೂರು
ಈ ಬಗ್ಗೆಯೂ ಬೆಳಕು ಚೆಲ್ಲಿ
ನಿಮ್ಮ  ಪತ್ರಿಕೆಯಲ್ಲಿ ದಿ. 28 ಮತ್ತು 29ರಂದು ಮೂಡಿ ಬಂದ, ಶಿರಾಡಿಘಾಟ್‌ನ ಚಿತ್ರಣ ಅದ್ಭುತವಾಗಿತ್ತು. ಇದನ್ನೇ ಹೋಲುವಂಥ, ಇದಕ್ಕಿಂತ ಕಡೆಗೆಟ್ಟಿರುವ ಹೆಚ್ಚು ಕಡಿಮೆ 50 ಕಿ.ಮೀ. ನಷ್ಟು ಉದ್ದದ (ದ.ಕ. ಜಿಲ್ಲೆಯ ಜಾಲ್ಯೂರಿನಿಂದ, ಸಂಪಾಜೆಯವರೆಗೆ) ರಸ್ತೆಯ ಬಗ್ಗೆಯೂ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಇಲ್ಲೂ ಕೂಡಾ ಹಲವಷ್ಟು ಜೀವಗಳು ಬಲಿಯಾಗಿವೆ. ಅದರಲ್ಲೂ ಪೈಚಾರ್ ಎಂಬ ಸೇತುವೆ ಇಂದು, ನಾಳೆ ಎಂಬಂತಿದೆ.
ಕೊಡಗಿನ ಜನತೆ ತುರ್ತು ಚಿಕಿತ್ಸೆಗೆ ಮಂಗಳೂರನ್ನೇ ಅವಲಂಬಿಸಿದ್ದಾರೆ. ಆ್ಯಂಬುಲೆನ್ಸ್ ಓಡಿಸುವವನೇ ಜೀವ ಕೈಯಲ್ಲಿ ಹಿಡಿದು ಈ ರಸ್ತೆಗಳಲ್ಲಿ ಓಡಿಸಬೇಕು. ಇದರ ನಡುವೆ ಬಿ.ಸಿ. ರೋಡ್ ಬಳಿ ಟೋಲ್‌ಗೇಟ್ ಒಂದರಲ್ಲಿ ಸುಲಿಗೆ ನಡೆಯುತ್ತಿದೆ. ಈ ಟೋಲ್ ದಾಟಿ ಹೋಗುವ ಪ್ರಯಾಣಿಕರ ಮೇಲೆ ತಲಾ 3 ರು. ಯಿಂದ 4 ರುಪಾಯಿಯವರೆಗೆ ಸುಲಿಗೆ ನಡೆಯುತ್ತಿದೆ. ಒಂದು ದಿನ ಒಂದು ಬಸ್ 90/- ರು. ಕಟ್ಟಬೇಕು. 52 ಆಸನ ಹೊಂದಿರುವ ಬಸ್ಸಿನಿಂದ ರೂ. 208/- ರೂ. ಬಂದಂತೆ. ಟೋಲ್ ಹೆಸರಿನಲ್ಲಿ ರೂ. 156/-ರ ಸುಲಿಗೆ. ಇಷ್ಟೆಲ್ಲ ಆದರೂ ರಸ್ತೆ ದುರಸ್ತಿ ಮಾತ್ರ ಇಲ್ಲ. ಇದರ ಬಗ್ಗೆ ತಾವು ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ, ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ, ಜನಪ್ರತಿನಿಧಿಗಳನ್ನು ಎಚ್ಚರಿಸಬೇಕು ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.
-ಎಸ್. ರಾಜೇಶ್, ಮಾಜಿ ಸೈನಿಕ, ಮಂಗಳೂರು.

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.