ಸಂಪಾದಕೀಯ

ಒಂದೇ ದೇಶ: ಒಂದೇ ಜಾಲ

Published On :

ಜನವರಿ 1. ಹೊಸ ವರ್ಷದ ಆರಂಭದ ದಿನ. ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಕರ್ನಾಟಕದ ರಾಯಚೂರು, ಮಹಾರಾಷ್ಟ್ರದ ಸೊಲ್ಲಾಪುರಗಳ ನಡುವೆ 765 ಕಿಲೋ ವೋಲ್ಟ್ ಸಾಮರ್ಥ್ಯದ ವಿದ್ಯುತ್ ಪ್ರಸರಣದ "ಮಾರ್ಗವನ್ನು"             ಸ್ಥಾಪಿಸಿತು. ಅದು ಹಲವು ದಶಕಗಳಿಂದಲೂ ವಿದ್ಯುತ್ ಪೂರೈಕೆಯ ಆಡಳಿತಗಾರರು, ಬಳಕೆದಾರರು ಎದುರು ನೋಡುತ್ತಿದ್ದ ದಿನ ಈ ಸಂಪರ್ಕದಿಂದ ಭಾರತದ ಎಲ್ಲ ಪ್ರದೇಶಗಳೂ ಒಂದೇ ವಿದ್ಯುತ್ ಜಾಲದ ವ್ಯವಸ್ಥೆಗೆ ಒಳಪಡುವುದು ಸಾಧ್ಯವಾಗುತ್ತದೆ.
ನಿಜ. ಆ ವಿದ್ಯುತ್ ವಿನಿಮಯದ ವ್ಯವಸ್ಥೆ ನಾಳೆಯಿಂದಲೇ ಆರಂಭವಾಗುವುದಿಲ್ಲ. ಸಂಪರ್ಕದ ವ್ಯವಸ್ಥೆ ರೂಪಗೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಇತರ ವ್ಯವಸ್ಥೆಯೂ ಮುಗಿದಾಗ, ಒಡಿಶಾ, ಚತ್ತೀಸಗಢಗಳಿಂದ ಕರ್ನಾಟಕ- ತಮಿಳುನಾಡು ವಿದ್ಯುತ್ ಜಾಲಗಳು ನೇರವಾಗಿ ವಿದ್ಯುತ್ ಪಡೆಯಬಹುದು. ಈಗ ಭಾರತದ ವಿದ್ಯುತ್ ಬಳಕೆಯ ಭೂಪಟದಲ್ಲಿ ಉತ್ತರ- ಪಶ್ಚಿಮ- ಪೂರ್ವ ಭಾರತಗಳಲ್ಲಿ ವಿದ್ಯುತ್ ಕೊರತೆ ಇಲ್ಲ. ತೀವ್ರ ಸ್ವರೂಪದ ಕೊರತೆಯನ್ನು ಎದುರಿಸುತ್ತಿರುವುದು ದಕ್ಷಿಣ ವಲಯ ಮಾತ್ರ. ಈಗ ಇಡೀ ದೇಶದ ವಿದ್ಯುಚ್ಛಕ್ತಿಯ ಪೂರೈಕೆ, ಪ್ರಸರಣ ವ್ಯವಸ್ಥೆ ಒಂದೇ ಆದಾಗ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಗತ್ಯ ಬಿದ್ದಾಗ ತತ್ಕ್ಷಣದಲ್ಲೇ ವಿದ್ಯುತ್ತನ್ನು ಒದಗಿಸಬಹುದು. ದೇಶದ ವಿದ್ಯುತ್ ಪೇಟೆಯಲ್ಲಿ (ಅದೇನೂ ಈಗ ದೊಡ್ಡ ಪೇಟೆಯಲ್ಲ) ಏಕರೂಪ ದರಗಳನ್ನು ರೂಪಿಸುವುದೂ ಈಗ ಸಾಧ್ಯವಾಗಬಹುದು.
ಇದರ ಜತೆಯಲ್ಲೇ ವಿದ್ಯುತ್ ವ್ಯವಸ್ಥೆಯ ಆಡಳಿತಗಾರರು, ನಿಯಂತ್ರಣ ವ್ಯವಸ್ಥೆಯ ಜವಾಬ್ದಾರಿ ಹೊತ್ತವರ ಮೇಲೆ ಮೇಲ್ವಿಚಾರಣೆಯ ದಕ್ಷತೆಯನ್ನು ಹೆಚ್ಚಿಸುವ ಜವಾಬ್ದಾರಿಯೂ ಬೀಳುತ್ತದೆ. ಸದ್ದು ಗದ್ದಲವಿಲ್ಲದೆ ನಡೆದಿರುವ ಸಾಧನೆ ಇದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.