ಗಂಡಸರಿಗೆ ಮೀಸೆ ಇದ್ದರೆ ಡಿಮ್ಯಾಂಡು.
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಗಂಡಸರಿಗೆ ಮೀಸೆ ಇದ್ದರೆ ಡಿಮ್ಯಾಂಡು.
ಅದೇ ಹೆಂಗಸರಿಗೆ?
ಮೀಸೆ ಮೇಲೆ ಆಸೆ ಇದ್ದರೆ!
ಲಕ್ಷ್ಮೀ ಬರ್ಕಲಿರಮೇಶ, ಕುರಗಂದೂರು, ಮಂಡ್ಯ, 9538786547
ಮದುವೆ ಎಂಬ ಮೂರಕ್ಷರದ ಅರ್ಥವೇನು?
ಅದನ್ನು ಹುಡುಕಲೆಂದೇ ಜನ ಇನ್ನೂ
ಮದುವೆಯಾಗುತ್ತಲೇ ಇದ್ದಾರೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಸರ್ವಾಂಗ ಸುಂದರಿ ಎಂದರೆ ಹೇಗಿರುತ್ತಾಳೆ?
ಶಾಲೆಯಲ್ಲಿ ಸರ್ವಾಂಗ ಸುಂದರ ವ್ಯಾಯಾಮ ಮಾಡಿದವರಿಗೆ ಮಾತ್ರ ಅದು ಗೊತ್ತಿರುತ್ತದೆ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಆಚಾರವಿರುವ ನಾಲಿಗೆಯೂ ಕೆಲವೊಮ್ಮೆ
ನೀಚಬುದ್ದಿಯನ್ನು ಏಕೆ ತೋರಿಸುತ್ತದೆ?
'ಸಂಸ್ಕಾರ' ಬರೆದವರೂ ಸಂಸ್ಕಾರವಿಲ್ಲದವರಂತೆ ವರ್ತಿಸುತ್ತಾರಲ್ಲ ಅದಕ್ಕೆ!
ಬಿ.ವಿ. ನಾರಾಯಣ್ ಬೆಳಗೊಳ, ಮಂಡ್ಯ, 9964569971
ಕೊಟ್ಟೋನು ಕೋಡಂಗಿ, ಇಸ್ಕಂಡೋನು ವೀರಭದ್ರ. ಹಾಗಾದ್ರೆ ಮಧ್ಯಸ್ಥಿಕೆ ವಹಿಸಿದವನು?
ಬುದ್ಧಿಜೀವಿ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

