ನಿವೃತ್ತಿ ಹೊಂದಿದವರನ್ನು ಕಣ್ತುಂಬ ನೋಡಿದ ಜಾಗ ಎಂದರೆ ಬಿಗ್‌ಬಾಸ್.
-ಲೋಲೇಂದ್ರ ಸಿಂಗ್
ತೃಣಮೂಲ ಕಾಂಗ್ರೆಸ್‌ನ ನ್ಯಾಯಪದ್ಧತಿ. ಅತ್ಯಾಚಾರ ಮಾಡುತ್ತೇನೆಂದು ಬೆದರಿಕೆ ಹಾಕಿದ್ದೀಯಾ? ಹಾಗಾದರೆ ಸಾರಿ ಕೇಳಿಬಿಡು, ಎಲ್ಲ ಸರಿಯಾಗುತ್ತೆ. ಮಮತಾ ಬ್ಯಾನರ್ಜಿ ಬಗ್ಗೆ ಕಾರ್ಟೂನ್ ಬರೆದಿದ್ದೀಯಾ? ಹಾಗಾದರೆ ನಡೀ ಜೈಲಿಗೆ!
-ರಮೇಶ ಶ್ರೀವತ್ಸ
ಶೀಲಾ ದೀಕ್ಷಿತ್ ಬಳಿ 31 ಹವಾ ನಿಯಂತ್ರಣ ಸಾಧನಗಳಿದ್ದವಂತೆ. ಇದೇ ದೀಕ್ಷಿತ್ ತಾವು ಮುಖ್ಯಮಂತ್ರಿಯಾಗಿದ್ದಾಗ, ಕೆಲಸದ ಒತ್ತಡದ ಸಮಯದಲ್ಲಿ ಎಸಿ ಬಳಸಬೇಡಿ ಎಂದು ದೆಹಲಿಗರಿಗೆ ಕರೆ ಕೊಟ್ಟಿದ್ದರು!
-ಬ್ಯಾಟಲ್‌ಬಾಜ್
ಶೇ. 100 ಅಂಕದವರಿಗೆ ಮಾತ್ರ ಪ್ರವೇಶ ಎಂದು ಯಾವುದಾದರೂ ಕಾಲೇಜು ಹೇಳಿದರೆ ಖಂಡಿತ ಅದು ಶ್ರೇಷ್ಠ ಸಂಸ್ಥೆ ಅಂತಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪಗಳಿವೆ ಎಂದು ಅರ್ಥಮಾಡಿಕೊಳ್ಳಬೇಕು.
- ಚೇತನ್ ಭಗತ್