ಪರದಾಟ

Updated on: 

ಪರ ಊರಿಗೆ ಹೋದಾಗ ಪಡುವ ಸಂಕಟ
    ಪರ ಪರ ಎಂದು ಕೆರೆದುಕೊಳ್ಳಬೇಕೆನಿಸುವಂಥ ಅವಸ್ಥೆ
    ಪ್ರಮುಖರೆಲ್ಲ ಔಟಾಗಿ ಪರಾಜಯಕ್ಕೆ ಹತ್ತಿರವಾಗುತ್ತಿದ್ದಂತೆ ಆಟ ಗೆಲ್ಲಲೇಬೇಕೆಂದು ಪಡುವ ಪ್ರಯತ್ನ
    ಹೆಣಭಾರದ ವಸ್ತುಗಳನ್ನು ಹೊತ್ತು ಸಾಗಿಸುವಾಗಿನ ಹೆಣಗುವಿಕೆ
    ಪರದೆಯ ಹಿಂದೆ ಶ್ರಮ ಪಡುವವರ ಕಷ್ಟ
    ಜೀವನವೆಂಬ ಆಟದ ಮೈದಾನದಲ್ಲಿ ಭಗವಂತ ಆಡಿಸುವ ಆಟ
    ಅತ್ತ ದರಿ, ಇತ್ತ ನಾರಿ ಎಂಬಂಥ ಸ್ಥಿತಿಯಲ್ಲಿ ಆಯ್ಕೆಗಾಗಿನ ಕಸರತ್ತು
    ಗಟ್ಟಿ ಪರೋಟ ಕೊಟ್ಟಾಗ ತಿನ್ನಲೂ ಆಗದ ಬಿಡಲೂ ಆಗದ ಸ್ಥಿತಿ
    ನಗರ ವಾಸಿಗಳ ದಿನಚರಿಯ ಸಾಮಾನ್ಯ ಅಂಶ
    ಬಿಡುವ ಹಾಗೂ ಇಲ್ಲ, ತೊಡುವ ಹಾಗೂ ಇಲ್ಲ. ಆಗ ಪರದಾಡುವುದೊಂದೇ ದಾರಿ
    ಈ ಆಟ ಡ್ರಾನಲ್ಲಿ ಕೊನೆಗೊಳ್ಳುವುದೇ ಹೆಚ್ಚು
    ಒಂದು ದಿನವೂ ಸುಖಪಡದ ರೈತನ ನಿತ್ಯ ಹಳವಂಡ
    ಹೊತ್ತು ಹೊತ್ತಿನ ಊಟಕ್ಕಾಗಿ ಪುರುಸೊತ್ತಿಲ್ಲದೇ ಆಡುವ ಒತ್ತಾಯದ ಆಟ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com