ಪರದಾಟ

Updated on: 

ದಿಕ್ಕೇ ತೋಚದ ಮುಗ್ಧನಂತೆ ಮೂಢನಾದಾಗ ಬೇರೆ ದಿಕ್ಕೇ ಇಲ್ಲದೇ ದುಃಖಿಸಬೇಕೆಂಬಂತೆ ಮಾಡುವ ಸನ್ನಿವೇಶ
    ಪಾಚಿಯ ಮೇಲೆ ಕಾಲಿಟ್ಟಾಗ ಫಸಲ್ ಎಂದು ಜಾರುತ್ತದಲ್ಲಾ ಆಗ ಒದಗುವ ಪೇಚು
    ಬಾಸ್ ಬಳಿ ರಜೆ ಕೇಳುವಾಗ ಪಡುವ ಪಡಿಪಾಟಲು
    ಪರದಾ ಒಳಗಿನ ಆಟ
    ನಿತ್ಯ ಪರರ ಮನೆ ಊಟ ಮಾಡಿದ್ದರ ಫಲಿತಾಂಶ
    ಜುಟ್ಟು ಹಿಡಿದು ತಲೆಯನ್ನು ನೀರಿನಲ್ಲಿ ಮುಳುಗಿಸಿ ಹಿಡಿದಾಗ ಪಡುವ ಚಡಪಡಿಕೆ
    ಜೀವನದ ಪಿರಿಪಿರಿಗಳು ತಂದೊಡ್ಡುವುದು ಇದನ್ನೇ
    ಪೀಕ್ ಅವರ್‌ನಲ್ಲಿ ವಾಹನಗಳ ಪೀಕ್ ಪೀಕ್ ಎಂಬ ಶಬ್ದದಿಂದಾಗಿ ಅನುಭವಿಸುವ ಪೀಕಲಾಟ
    ಪದೇ ಪದೇ ಎದುರಾಗುವ ವಿಘ್ನಗಳು ಹುಟ್ಟು ಹಾಕುವ ಉದ್ವಿಗ್ನಾವಸ್ಥೆ
    ಪರೀಕ್ಷೆಯಲ್ಲಿ, ಇಂಟರ್‌ವ್ಯೂನಲ್ಲಿ, ಇದು ಸಾಮಾನ್ಯ
    ಸಮ್ಮರಿ ಕೇಳಿದಾಗಲೇ ಮೆಮೊರಿ ಕೈ ಕೊಟ್ಟರೆ.....
    ಪರದಾರಾಳೊಂದಿಗೆ ಆಟವಾಡಿ ಸಿಕ್ಕಿಬಿದ್ದ ಮೇಲೆ ಆಡುವ ಒದ್ದಾಟ
    ಬಡವನ ಹಣೆಬರಹ, ದುರ್ಬಲರ ನಿತ್ಯಕರ್ಮ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com