ಪ್ರಾಥಮಿಕ ಶಿಕ್ಷಣದ ದುರವಸ್ಥೆ
ಭಾರತ ಉದ್ಧಾರವಾಗಬೇಕಾಗಿದ್ದರೆ, ಮೊದಲು ಆಗಬೇಕಾದ ಕೆಲಸ ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಏರಿಕೆ. ಆ ಹಂತದಲ್ಲಿ ಎಡವಿದರೆ ಮುಂದೆ ಎದ್ದೇಳುವುದು ಕಷ್ಟ ಎನ್ನುವ ವಿಖ್ಯಾತ ಆರ್ಥಿಕ-ಸಮಾಜಶಾಸ್ತ್ರ ತಜ್ಞ ಅಮರ್ತ್ಯ ಸೆನ್ ಅವರ ನುಡಿಗಟ್ಟನ್ನು ಅನೇಕರು ಪದೇ ಪದೆ ಪ್ರಸ್ತಾಪಿಸುತ್ತಾರೆ.
ಆದರೆ ಸರ್ಕಾರದ ಪ್ರಾಥಮಿಕ ಹಂತದ ಶಿಕ್ಷಣದ ಈಗಿನ ಸ್ಥಿತಿ-ಗತಿ ಹೇಗಿದೆ ಎನ್ನುವುದನ್ನು ತಿಳಿಯಲು ಯಾರೂ ಗಂಭೀರವಾದ ಪ್ರಯತ್ನ ನಡೆಸಿದಂತಿಲ್ಲ. ಕರ್ನಾಟಕದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಒಂದು ದೊಡ್ಡ ಸಮಸ್ಯೆ.
ಬುಧವಾರ (ಜೂನ್ ನಾಲ್ಕು) ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಸರ್ಕಾರ ಸುಮಾರು ಹನ್ನೊಂದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ ಎಂದು ಪ್ರಕಟಿಸಿದ್ದು ಒಳ್ಳೆಯದೇ. ಆದರೆ ಈ ನೇಮಕದ ಪ್ರಕ್ರಿಯೆ ಮುಗಿಯಲಿಕ್ಕೆ ಅಕ್ಟೋಬರ್ವರೆಗೂ ಹಿಡಿಯುತ್ತದೆ. ಈಗಾಗಲೇ ಮಕ್ಕಳ ತರಗತಿಗಳು ಆರಂಭವಾಗಿವೆ. ಖಾಸಗಿ ವಲಯದಲ್ಲಿ ಬೋಧನೆಯೂ ಆರಂಭವಾಗಿದೆ. ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದ ಸ್ಥಿತಿ. ಅದು ಕನಿಷ್ಠಪಕ್ಷ ಅಕ್ಟೋಬರ್ವರೆಗೂ ಮುಂದುವರಿಯುತ್ತದೆ. ಅಲ್ಲಿಯವರೆಗೆ ಮಕ್ಕಳು ಕಲಿಯುವುದೇನನ್ನು? ಕಲಿಸುವವರು ಯಾರು?
ಅನೇಕ ಕಡೆಗಳಲ್ಲಿ, ಪ್ರಧಾನವಾಗಿ ಉತ್ತರ ಕರ್ನಾಟಕದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಶಿಕ್ಷಕರ ಕೊರತೆಯಿಂದಾಗಿ ಒಂದಕ್ಕಿಂತ ಹೆಚ್ಚು ತರಗತಿಗಳನ್ನು ಒಂದೇ ಕಡೆ, ಒಬ್ಬರೇ ಶಿಕ್ಷಕರು ನಡೆಸುವುದು ಮಾಮೂಲಿ ಸ್ಥಿತಿಯಾಗಿದೆ. ಹಾಗಿದ್ರೆ ರಾಜ್ಯದಲ್ಲಿ ಒಂದು ವರ್ಷದ ಹಿಂದೆ ಅಧಿಕಾರದ ಸೂತ್ರಗಳನ್ನು ಹಿಡಿದ ಸರ್ಕಾರ ಏನು ಮಾಡುತ್ತಿತ್ತು? ಕಲಿಕಾ ಮಾಧ್ಯಮದ ವಿಚಾರದಲ್ಲಿ ಹೋರಾಟಕ್ಕೆ ಎಲ್ಲರೂ ಸಿದ್ಧ. ಆದರೆ ಶಾಲೆಯ ಗುಣಮಟ್ಟದ ವಿಚಾರದಲ್ಲಿ ಯಾರ ಮಾತೂ ಇಲ್ಲ. ಅಮರ್ತ್ಯ ಸೆನ್ ಅವರ ಮಾತನ್ನು ಸರ್ಕಾರದಲ್ಲಿ ಯಾರೂ ಕೇಳಿಸಿಕೊಂಡಿಲ್ಲವೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

