ಸಂಪಾದಕೀಯ

ಅಪರೂಪದ ವರದಿ

ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್‌ನಲ್ಲಿ 682 ಕೋಟಿ ರುಪಾಯಿಗಳ ನಷ್ಟವಾಗಿದ್ದಕ್ಕೆ ..

Published On :

ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್‌ನಲ್ಲಿ 682 ಕೋಟಿ ರುಪಾಯಿಗಳ ನಷ್ಟವಾಗಿದ್ದಕ್ಕೆ ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಏಳು ಐ.ಎ.ಎಸ್. ಅಧಿಕಾರಿಗಳ ಹೊಣೆಗೇಡಿತನವೇ ಕಾರಣ ಎನ್ನುವ ಆರೋಪ ಲೋಕಾಯುಕ್ತರ ತನಿಖೆಗೆ ಒಳಪಟ್ಟಿರುವ ಸಮಯದಲ್ಲೇ ಸರ್ಕಾರ ಆ ಅಧಿಕಾರಿಗಳನ್ನು ಕೆಲಸದ ಮೇಲೆ ತೆಗೆದುಕೊಂಡಿದ್ದಕ್ಕೆ ವಿಧಾನ ಸಭೆಯ ಅಧಿವೇಶನದಲ್ಲಿ ಕೆಲವರ ವಿರೋಧ ಕಂಡುಬಂದಾಗ, ಸರ್ಕಾರ ಈ ವಿಚಾರದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿತ್ತು.
 ಅಲ್ಲಿಗೆ ಆ ಪ್ರಸ್ತಾಪ ಸಾರ್ವಜನಿಕರ ಮನಸ್ಸಿನಿಂದ ದೂರವಾದಂತೆಯೇ ಆಗಿತ್ತು. ಆದರೆ ವಿಧಾನ ಸಭೆಯ ಸರ್ಕಾರಿ ಭರವಸೆಗಳ ಸಮಿತಿ, ಬೆಳಗಾವಿಯಲ್ಲಿ ಸಭೆ ನಡೆಸಿ, ಸರ್ಕಾರದ ಈ ಕ್ರಮ ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಪ್ರಕಟಿಸಿದೆ.  ಸಮಿತಿಯ ಅಧ್ಯಕ್ಷ ಶಾಸಕ ತನ್ವೀರ್ ಸೇಟ್ ಅವರ ಪ್ರಕಾರ 2011ರಲ್ಲಿ ನಡೆದ ಈ ಘಟನೆಯಲ್ಲಿ, ಲೋಕಾಯುಕ್ತ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪವೂ ಇದೆ. ಈಗ ಸಮಿತಿ, ಸರ್ಕಾರದ ತೀರ್ಪನ್ನು ಪುನರ್‌ಪರಿಶೀಲಿಸಿ, ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತವಾದ ತನಿಖೆಗೆ ಏರ್ಪಾಟು ಮಾಡಿ, ಅನಂತರ ಅಗತ್ಯವಾದ ಕ್ರಮ ಜರುಗಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುವ ನಿರ್ಧಾರವಾಗಿದೆ.
ನಿಜಕ್ಕೂ ಇದೊಂದು ಗಂಭೀರವಾದ ಪ್ರಕರಣ. ಈ ಪ್ರಕರಣ, ವಿಧಾನ ಸಭೆಯ ಸರ್ಕಾರದ ಭರವಸೆಗಳ ಸಮಿತಿ ಅಸ್ತಿತ್ವದಲ್ಲಿದ್ದು ಅದು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರಕ್ಕೆ ಎಚ್ಚರಿಕೆಯಂತಿರುವ ಈ ವರದಿ, ಅಪರೂಪವಾದದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.