ಸಂಪಾದಕೀಯ

ಇನ್ನು ವಿಳಂಬ ಬೇಡ

Published On :

ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರ ವರದಿಯಲ್ಲಿ, ಮೈಸೂರು ಮಿನರಲ್ಸ್ ಸಂಸ್ಥೆಯ ಅನೇಕ ಅಧಿಕಾರಿಗಳ ಹೆಸರುಗಳು ಕಂಡುಬಂದಿದ್ದು, ಅವರೆಲ್ಲರ ವಿರುದ್ಧ ಪ್ರಕಟವಾಗಿರುವ ಆರೋಪಗಳ ತನಿಖೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹವಾದ ವಿಚಾರ.
ಇಂತಹ ನಿರ್ಧಾರ, ಸಂತೋಷ ಹೆಗ್ಡೆ ಅವರ ವರದಿ ಪ್ರಕಟವಾದ ಕೆಲವು ದಿನಗಳಲ್ಲಿ ಅಥವಾ ಕೆಲವು ವಾರಗಳಲ್ಲೇ ಸರ್ಕಾರಕ್ಕೆ ಪಥ್ಯವಾಗಿದ್ದರೆ ಚೆನ್ನಾಗಿತ್ತು. ಲೋಕಾಯುಕ್ತರ ವರದಿಯನ್ನೇ ಜನ ಮರೆಯುವ ಸಮಯದಲ್ಲಿ ಇಂತಹ ತನಿಖೆಯಿಂದ ಎಷ್ಟರ ಮಟ್ಟಿಗೆ ಪ್ರಯೋಜನವಾದೀತು ಎನ್ನುವ ವಿಚಾರ ಬೇರೆ.
ಹೇಳಿ ಕೇಳಿ ಮೈಸೂರು ಮಿನರಲ್ಸ್ ಸಂಸ್ಥೆ ಸಂಪೂರ್ಣವಾಗಿ ಸರ್ಕಾರದ ಮಾಲಿಕತ್ವಕ್ಕೆ ಸೇರಿದ್ದು. ಅಲ್ಲಿ ಭ್ರಷ್ಟಾಚಾರ ನಡೆಯುವುದು, ಲೆಕ್ಕ ಪತ್ರಗಳ ಅಪರಾತಪರಾ ನಡೆಯುವುದು ನೇರವಾಗಿ ಸರ್ಕಾರದಲ್ಲಿ ನಡೆದ ಅವ್ಯವಹಾರಕ್ಕೆ ಸಮಾನ. ಅದರಲ್ಲೂ ಈಗ ಆರೋಪ ಪ್ರಕಟವಾಗಿರುವುದು ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ.
ಇಲ್ಲಿ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದೇ ಆಗಿರುವುದರಿಂದ, ಸಿದ್ದರಾಮಯ್ಯ ನೇತೃತ್ವದ ಮಂತ್ರಿ ಮಂಡಲ ವಿಳಂಬವಾದರೂ ತನಿಖೆಗೆ ಆದೇಶ ನೀಡಲು ನಿರ್ಧರಿಸಿದ್ದು ಅಪರೂಪದಲ್ಲಿ ಅಪರೂಪವೆನ್ನುವಂತಹ ಪ್ರಕರಣ.
ಸಾಮಾನ್ಯವಾಗಿ ಇಂತಹ ಆರೋಪಗಳನ್ನು ಮುಚ್ಚಿಹಾಕುವುದರಲ್ಲೇ ಸರ್ಕಾರ ಆಸಕ್ತವಾಗಿರುತ್ತದೆ. ಆ ಆಮಿಷದಿಂದ ದೂರ ನಿಂತಿದ್ದಕ್ಕೆ ಮಂತ್ರಿ ಮಂಡಲಕ್ಕೆ ಅಭಿನಂದನೆಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.