ಆಧಾರ್ ಬೇಡ - ಗ್ಯಾಸ್ ಬೆಲೆ ಸ್ಥಗಿತ
ಚುನಾವಣೆಯನ್ನು ಸಾಧ್ಯವಿರುವಷ್ಟು ಮಟ್ಟಿಗೂ ನಿಷ್ಪಕ್ಷಪಾತವಾದ ವಾತಾವರಣದಲ್ಲಿ ನಡೆಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಸುಪ್ರೀಮ್ ಕೋರ್ಟ್ ಹಾಗೂ ಚುನಾವಣೆ ಆಯೋಗ ಸೋಮವಾರ ಸರ್ಕಾರಕ್ಕೆ ನಿಖರವಾದ ಆದೇಶಗಳನ್ನು ನೀಡಿದ್ದು ಸ್ವಾಗತಾರ್ಹವಾದದ್ದು. ಸರ್ಕಾರದ ಹಲವು ಬಗೆಯ ನೆರವಿನ ಯೋಜನೆ ಫಲಾನುಭವಿಗಳು ಆಧಾರ್ ಕಾರ್ಡ್ ಪಡೆದಿದ್ದರಷ್ಟೇ ಅರ್ಹರು ಎನ್ನುವ ಸರ್ಕಾರದ ಆದೇಶವನ್ನು ಕಾರ್ಯಗತಗೊಳಿಸಬಾರದೆಂದೂ, ತತ್ಕ್ಷಣದಿಂದಲೇ ಅದು ನಿಲ್ಲಬೇಕೆಂದೂ ಸುಪ್ರೀಮ್ ಕೋರ್ಟ್ ಆದೇಶ ನೀಡಿರುವುದಷ್ಟೇ ಅಲ್ಲ, ಹಿಂದೆಯೇ ಈ ವಿಚಾರದಲ್ಲಿ ಆದೇಶ ನೀಡಿದ್ದರೂ, ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಈಗಲೂ ಆಧಾರ್ ಕಾರ್ಡ್ ಕಡ್ಡಾಯದ ನಿಯಮ ಪ್ರಸ್ತಾಪಿಸುವುದನ್ನು ನಿಷೇಧಿಸಬೇಕು ಎಂದಿದೆ.
ಸೋಮವಾರವೇ ಪ್ರಕಟವಾದ ಚುನಾವಣೆ ಆಯೋಗದ ಆದೇಶದಂತೆ, ಸರ್ಕಾರ ಅನಿಲ ಉತ್ಪಾದಕ ಸಂಸ್ಥೆಗಳಿಗೆ ಗ್ಯಾಸ್ ಬೆಲೆಯನ್ನು ಏರಿಸಲು ಅನುಮತಿ ಕೊಡುವಂತಿಲ್ಲ. ಈಗಾಗಲೇ ಸುಪ್ರೀಮ್ ಕೋರ್ಟ್ನ ಮುಂದೆ ಈ ವಿಷಯ ಪ್ರಸ್ತಾಪವಾಗಿ, ಅದು ಪರಿಶೀಲನೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಪ್ರಕ್ರಿಯೆ ಆರಂಭವಾದ ಅನಂತರ ಅನಿಲದ ಬೆಲೆಯನ್ನು ಈಗ ಏರಿಸುವುದು ಅನುಚಿತ. ಸರ್ಕಾರ ಈ ಎರಡೂ ಆದೇಶಗಳನ್ನು ಪಾಲಿಸುವ ವಚನ ನೀಡಿರುವುದು ಸಮಾಧಾನಕರವಾದ ವಿಚಾರವೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

