ಸಂಪಾದಕೀಯ

ಅತಿಯಾಗುತ್ತಿರುವ ಮಂಗಳಮುಖಿಯರ ಉಪಟಳ

Published On :

ಇತ್ತೀಚಿನ ದಿವಸಗಳಲ್ಲಿ ಮಂಗಳಮುಖಿಯರ ಉಪಟಳವು ಸಮಾಜಕ್ಕೆ ಪೀಡೆಯಾಗುತ್ತಿದೆ. ಸಾಮಾನ್ಯವಾಗಿ ಸಿಗ್ನಲ್ ಸೈಟುಗಳಿರುವೆಡೆ -ಕೆಂಪು ದೀಪ ಕಾಣಿಸಿದಾಗ ಅಲ್ಲಿ ನಿಲ್ಲುವ ವಾಹನ ಸವಾರರಿಗೆ ಲೈಂಗಿಕ ಹಾವಭಾವ ತೋರಿಸುತ್ತಾ ನೋಟುಗಳನ್ನು ಕಸಿದುಕೊಳ್ಳುತ್ತಿರುವುದು ಮಾಮೂಲಾಗಿತ್ತು.
ಪ್ರಸಕ್ತ ಮಂಗಳಮುಖಿಯರು ತಂಡಗಳಲ್ಲಿ ಮದುವೆ-ಗೃಹಪ್ರವೇಶ-ಇತ್ಯಾದಿ ಶುಭ ಸಮಾರಂಭ ನಡೆಯುವಲ್ಲಿ ನೇರವಾಗಿ ಆಕ್ರಮಣ ಮಾಡಿ ಕಾರ್ಯಕ್ರಮಕ್ಕೆ ವಿಘ್ನ ತಂದೊಡ್ಡುವ ಕಾರ್ಯ ಮಾಡಿ ಸಂಬಂಧಿತರಿಂದ ಕನಿಷ್ಟ ಒಂದು ಸಾವಿರ ರೂಪಾಯಿಯನ್ನು ಸೆಳೆದುಕೊಂಡು ಹೋಗುವ ಕಾಯಕದಲ್ಲಿ ನಿರತರಾಗಿದ್ದಾರೆ. ಮದುವೆಯ ಮಂಟಪದಲ್ಲಿ ತಾಳಿಕಟ್ಟುವ -ಮಾಲೆ ಹಾಕುವ ಸಂದರ್ಭ ಗಮನಿಸಿಕೊಂಡು ನುಗ್ಗುವ ಇವರು ಯಾರಾದರೂ ಪ್ರತಿಭಟಿಸಿದರೆ ಅರೆನಗ್ನ ದೇಹ ಪ್ರದರ್ಶಿಸಿ ಸಮಾರಂಭ ಪತ್ರಿಕೆಯನ್ನು ಹಾಳುಗೆಡವುದರೊಂದಿಗೆ ಮೊತ್ತವನ್ನು ಬಲಾತ್ಕಾರವಾಗಿ ಪಡೆದು ಮಾಯವಾಗುತ್ತಿರುವುದು ಸಮಾರಂಭಗಳಲ್ಲಿ ಕಂಡು ಬರುತ್ತಿರುವ ದೃಶ್ಯ. ಇವರ ಉಪಟಳಕ್ಕೆ ಕಡಿವಾಣ ಹಾಕಲು ಸಂಬಂಧಿತ ಕಾರ್ಯಾಲಯವು ಎಚ್ಚೆತ್ತು ಈ ಅಶ್ಲೀಲ ವ್ಯವಸ್ಥೆಗೆ ಪೂರ್ಣ ವಿರಾಮ ಹಾಕಬೇಕಾಗಿದೆ.
-ಕೋಟೇಶ್ವರ ಸೂರ್ಯನಾರಾಯಣರಾವ್, ಬಸವನಗುಡಿ

ಐಷಾರಾಮಿತನ ಸಲ್ಲದು
ಬರೋಬ್ಬರಿ 2.5 ಕೋಟಿ ರೂಪಾಯಿ ಖರ್ಚು ಮಾಡಿ ತಮಗೆ ನೀಡಿದ ಮನೆಯನ್ನು ಸರ್ಕಾರದ ಹಣದಿಂದ ಅರಮನೆಯನ್ನಾಗಿಸಿದ್ದಾರೆ ಲೋಕೋಪಯೋಗಿ ಸಚಿವ ಮಹದೇವಪ್ಪನವರು. ಇವರು ಪ್ರಜಾತಂತ್ರದಲ್ಲಿ ಆರಿಸಿ ಬಂದ ಪ್ರಜಾಪ್ರತಿನಿಧಿಗಳೇ, ಇಲ್ಲಾ ಮೊಘಲ್ ರಾಜ ಕುವರರೇ? ಬಡ ಭಾರತೀಯನ ಬೆವರಿನ, ತೆರಿಗೆಯ ಕಾಸನ್ನು ಈ ಪ್ರಕಾರ ದುಂದು ವೆಚ್ಚ ಮಾಡುವ ಸಚಿವರಿಗೆ ನಮ್ಮ ರಾಜ್ಯದಲ್ಲಿ ಹರುಕು-ಮುರುಕಾದ, ಸುಣ್ಣಬಣ್ಣದ ಲೇಪನ ಕಾಣದ ಅದೆಷ್ಟು ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಶಾಲೆಗಳು, ತಾಲ್ಲೂಕು ಆಫೀಸುಗಳು, ಪೊಲೀಸ್ ಸ್ಟೇಷನ್‌ಗಳು, ಬಸ್ ನಿಲ್ದಾಣಗಳು ಇವೆ ಎಂಬ ಪ್ರಾಥಮಿಕ ಜ್ಞಾನವೇನಾದರೂ ಇದೆಯೇ?
-ಎನ್.ಡಿ. ಕಾರಂತ, ಮೈಸೂರು

ನೆರವು ನೀಡಿ
ಬಾಲಕೃಷ್ಣ ಕಾಮತ್ ಮತ್ತು ರಮಾವತಿ ಕಾಮತ್ ಇವರ ಮಗನಾದ ನಾನು ದ್ವಿತೀಯ ಪಿಯುಸಿ ತನಕ ವ್ಯಾಸಂಗ ಮಾಡಿದ್ದು, ತದನಂತರ 2005 ಜುಲೈ 5ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರಕ್ಕೆ ಕಾರ್ಯನಿಮಿತ್ತ ತೆರಳಿ ವಾಪಸ್ ಬರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಎರಡು ಕಣ್ಣಿನ ದೃಷ್ಟಿ ಮಂದವಾಗಿತ್ತು. ಬಳಿಕ ಸೆಪ್ಟೆಂಬರ್ 13, 2005ರಂದು ಮಣಿಪಾಲದ ನೇತ್ರ ತಜ್ಞರು ನರದೌರ್ಬಲ್ಯದಿಂದ ದೃಷ್ಟಿ ಹೋಗಿದೆ ಎಂದು ತಿಳಿಸಿರುತ್ತಾರೆ. 2009 ಜುಲೈ 31ರಂದು ಬೆಂಗಳೂರಿನ ನಾರಾಯಣ ನೇತ್ರಾಲಯದ ತಜ್ಞ ವೈದ್ಯರು ದೃಷ್ಟಿ ಬರುವ ಸಾಧ್ಯತೆ ಕಡಿಮೆ ಎಂದು ತಿಳಿಸಿರುತ್ತಾರೆ. 2013 ಅಕ್ಟೋಬರ್ 2 ಉಡುಪಿಯ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್‌ರವರು ಚಿಕಿತ್ಸೆ ನೀಡಿರುತ್ತಾರೆ. ಆದರೆ ಯಾವುದೇ ಪರಿಣಾಮ ಬೀರಲಿಲ್ಲ. ನನ್ನ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು ತಂದೆ-ತಾಯಿ ಇಳಿ ವಯಸ್ಸಿನಲ್ಲಿದ್ದು  ಯಾರಾದರೂ ಸಹಾಯ ಮಾಡುವರೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಸಹಾಯ ಮಾಡುವವರು:
-ಗಣೇಶ್ ಕಾಮತ್
ಮಂದಾರ್ತಿ ವಿಜಯ ಬ್ಯಾಂಕ್
ಖಾತೆ ನಂ. 11400 1101000027
ಐ.ಎಫ್.ಸಿ. ಕೋಡ್: ವಿಐಜೆಬಿ0001140
ಮೊ. 9945 24 7246

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.