ಸ್ಮೃತಿ ಇರಾನಿ ಎಬ್ಬಿಸಿದ ವಿವಾದ
ಕೇಂದ್ರ ಮಂತ್ರಿಮಂಡಲದಲ್ಲಿ ಅತಿ ದೊಡ್ಡ ಮಂತ್ರಾಲಯವನ್ನು ಹೊಂದಿರುವ ಇಲಾಖೆಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಇಲಾಖೆಯೂ ಒಂದು. ಈ ಮಂತ್ರಾಲಯದ ಕಾರ್ಯವ್ಯಾಪ್ತಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೂ ವಿಸ್ತಾರವಾಗಿ ಹಬ್ಬಿದೆ.
ಇಂತಹ ಇಲಾಖೆಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅನುಭವವಿರುವವರು ಮಂತ್ರಿಗಳನ್ನಾಗಿ ನೇಮಿಸುವುದು ವಾಡಿಕೆ. ಆದರೆ ಈಗ ನರೇಂದ್ರ ಮೋದಿ ಅವರು ಕಿರುತೆರೆಯ ಕಲಾವಿದೆ ಸ್ಮೃತಿ ಇರಾನಿ ಅವರನ್ನು ನೇಮಿಸಿರುವುದು ಹಲವಾರು ಹುಬ್ಬುಗಳನ್ನು ಮೇಲೇರಿಸಿದೆ. ಸ್ಮೃತಿ ಇರಾನಿ ಅವರು ಏನು ಓದಿದ್ದಾರೆ ಎನ್ನುವ ವಿಚಾರವೇ ದೊಡ್ಡ ವಿವಾದಕ್ಕೆ ಇಟ್ಟುಕೊಂಡಿದೆ. ಮಂತ್ರಿಗಳಿಗೆ ನಮ್ಮ ಸಂವಿಧಾನದಲ್ಲಿ ಯಾವುದೇ ರೀತಿಯ ಕನಿಷ್ಠ ಅರ್ಹತೆಯನ್ನು ನಿಗದಿಪಡಿಸಿಲ್ಲ. ಆದ್ದರಿಂದ ಯಾರೇ ಆಗಲಿ ಸ್ಮೃತಿ ಇರಾನಿ ಅವರ ವಿದ್ಯಾಭ್ಯಾಸದ ಮಟ್ಟವನ್ನು ಕುರಿತು ಟೀಕಿಸುವುದು ಸರಿಯಲ್ಲ. ಮಂತ್ರಿಗಳಿಗೆ, ತಜ್ಞರ ನೆರವು, ಸಲಹೆ ಪಡೆಯುವ ಅಧಿಕಾರವಿದೆ. ಹಿರಿಯ ಅಧಿಕಾರಿಗಳ ಸಲಹೆಗಳನ್ನು ಪ್ರಾಂಜಲ ಮನಸ್ಸಿನಿಂದ ಪರಿಶೀಲಿಸುವ, ದೊಡ್ಡ ಮನಸ್ಸು ಬೇಕು.
ಇಷ್ಟಕ್ಕೂ "ಉನ್ನತ ಶಿಕ್ಷಣ" ನಾಯಕತ್ವವನ್ನು ರೂಪಿಸುವ ಏಕೈಕ ಸಾಧನವೇನೂ ಅಲ್ಲ. ಇದೆಲ್ಲವನ್ನು ಸ್ಮೃತಿ ಇರಾನಿ ಅವರ ವಿಚಾರದಲ್ಲಿ ಒಪ್ಪಬಹುದು. ಅವರೇ ಹೇಳಿರುವಂತೆ, ಅವರ ಯೋಗ್ಯತೆ ಅಥವಾ ಅರ್ಹತೆಯನ್ನು ಅವರ ಹೆಸರಿನ ಮುಂದಿರಬಹುದಾದ ಡಿಗ್ರಿಯ ಫಲಕದಿಂದ ಅಳೆಯಬಾರದು. ಅವರ ಕೆಲಸದಿಂದ ಅವರ ಅರ್ಹತೆಯನ್ನು ಗುರ್ತಿಸಬೇಕು. ಅದು ಸರಿಯಾದ ಮಾತೇ. ಆದರೆ ಸ್ಮೃತಿ ಇರಾನಿ ತಮ್ಮ ವಿದ್ಯಾಭ್ಯಾಸ ಕುರಿತು 2004 ರಲ್ಲಿ ಸಲ್ಲಿಸಿದ ಪ್ರಮಾಣ ಪತ್ರಕ್ಕೂ 2014 ರಲ್ಲಿ ಸಲ್ಲಿಸಿದ ಪ್ರಮಾಣ ಪತ್ರಕ್ಕೂ ಏನಾದರೂ ವ್ಯತ್ಯಾಸಗಳು ಕಂಡುಬಂದಿದ್ದರೆ, ಸಚಿವರು ಆ ವಿಚಾರದಲ್ಲಿ ವಿವರಣೆ ನೀಡಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

