ಜೈಪುರ ಗ್ರಾಮಾಂತರ ಕ್ಷೇತ್ರ: ರಾಜ್ಯವರ್ಧನ್ ರಾಥೋಡ್ ಗೆ ಕೃಷ್ಣಾ ಪೂನಿಯಾ ಎದುರಾಳಿ

ಒಲಿಂಪಿಕ್ ಪದಕ ವಿಜೇತೆ, ಡಿಸ್ಕಸ್ ಥ್ರೋ ಆಟಗಾರ್ತಿ ಕೃಷ್ಣ ಪೂನಿಯಾ ಕೇಂದ್ರ ವಾರ್ತಾ ಸಚಿವ ರಾಜ್ಯವರ್ಧನ್ ಸಿಂಗ್ ಎದುರಾಳಿಯಾಗಿ ಜೈಪುರ ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಕೃಷ್ಣ ಪೂನಿಯಾ
ಕೃಷ್ಣ ಪೂನಿಯಾ

ನವದೆಹಲಿ: ಒಲಿಂಪಿಕ್  ಪದಕ ವಿಜೇತೆ, ಡಿಸ್ಕಸ್ ಥ್ರೋ  ಆಟಗಾರ್ತಿ ಕೃಷ್ಣ ಪೂನಿಯಾ ಕೇಂದ್ರ ವಾರ್ತಾ ಸಚಿವ ರಾಜ್ಯವರ್ಧನ್ ಸಿಂಗ್ ಎದುರಾಳಿಯಾಗಿ ಜೈಪುರ ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದ 9 ಅಭ್ಯರ್ಥಿಗಳ ಪಟ್ಟಿಯಲ್ಲಿ ಕೃಷ್ಣ ಪೂನಿಯಾ ಅವರಿಗೆ ಜೈಪುರ ಗ್ರಾಮಾಂತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಮೂರು ಬಾರಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಕೃಷ್ಣಾ ಪೂನಿಯಾ  ರಾಜಸ್ತಾನದ ಸಾದಲ್ಪುರ್ ಕ್ಷೇತ್ರದ ಶಾಸಕಿಯಾಗಿದ್ದಾರೆ.

ರಾಜಸ್ತಾನದ ಆರು, ಮಹಾರಾಷ್ಟ್ರದ 2 ಹಾಗೂ ಗುಜರಾತಿನ 1 ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ನಿನ್ನೆ ಕಾಂಗ್ರೆಸ್ ಬಿಡುಗಡೆ ಮಾಡಿತ್ತು.  ಮೋಹನ್ ಜೋಷಿ ಅವರನ್ನು ಪುಣೆಯಿಂದ ಕಣಕ್ಕಿಳಿಸಲಾಗುತ್ತಿದೆ.

2010 ರ ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕೃಷ್ಣ ಪೂನಿಯಾ ಡಿಸ್ಕಸ್ ಥ್ರೋಯಿಂಗ್ ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com