ನಿಮ್ಮನ್ನು ಜೈಲಿಗೆ ತಳ್ಳುವುದಕ್ಕಾಗಿ ತ್ರಿವಳಿ ತಲಾಖ್ ಮಸೂದೆಯನ್ನು ಜಾರಿಗೆ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಿದರೆ ಹಲವು ಸಮಸ್ಯೆಗಳು ಪ್ರಾರಂಭವಾಗಲಿದೆ. ಗುಜರಾತ್ ನಲ್ಲಿ 2002 ರ ಗಲಭೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ಮೋದಿ ರಾಜೀನಾಮೆಗೆ ಆಗ್ರಹಿಸಿದ್ದವರ ಪೈಕಿ ನಾನೇ ಮೊದಲಿಗ. ಆಗ ಅನೇಕ ರಾಷ್ಟ್ರಗಳು ಮೋದಿ ಪ್ರವೇಶವನ್ನು ನಿಷೇಧಿಸಿದ್ದವು. ಈಗ ಪ್ರಧಾನಿಯಾದ ನಂತರ ಅಲ್ಪಸಂಖ್ಯಾತರನ್ನು ಮೋದಿ ಟಾರ್ಗೆಟ್ ಮಾಡುತ್ತಿದ್ದಾರೆ, ಮೋದಿ ಓರ್ವ ಭಯೋತ್ಪಾದಕ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.