96 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕ, ಅಸ್ಸಾಂ, ಬಿಹಾರ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಪ್ರಜಾಪ್ರಭುತ್ವದ ಕರ್ತವ್ಯ ನೆರವೇರಲಿದೆ. ಎರಡನೇ ಹಂತದ ಚುನಾವಣೆಯಲ್ಲಿ 12 ರಾಜ್ಯಗಳ ಘಟಾನುಘಟಿಗಳು ಅಖಾಡದಲ್ಲಿದ್ದಾರೆ. ಅದರಲ್ಲಿ ಪ್ರಮುಖರೆಂದರೆ, ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್, ಪಾನ್ ರಾಧಾಕೃಷ್ಣನ್, ಸದಾನಂದಗೌಡ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಡಿಎಂಕೆ ಪಕ್ಷದ ದಯಾನಿಧಿ ಮಾರನ್, ಎ.ರಾಜಾ, ಕನಿಮೋಳಿ ಇವರೆಲ್ಲರ ಭವಿಷ್ಯ ಇಂದು ಮತದಾರನ ಬೆರಳ ತುದಿಯಲ್ಲಿದೆ.