ನಾನು ಬಿಜೆಪಿ ಸೇರಿಲ್ಲ, ಮನೋಜ್ ತಿವಾರಿ ನನ್ನ ಉತ್ತಮ ಸ್ನೇಹಿತ, ಅದಕ್ಕಾಗಿ ಪ್ರಚಾರ: ಸಪ್ನಾ ಚೌಧರಿ

ನಾನು ಬಿಜೆಪಿ ಸೇರ್ಪಡೆಯಾಗಿಲ್ಲ, ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ನನ್ನ ಉತ್ತಮ ಸ್ನೇಹಿತ ಹೀಗಾಗಿ ಅವರ ಪರ ಪ್ರಚಾರದಲ್ಲಿ ಭಾಗವಹಿಸಿರುವುದಾಗಿ ನಟಿ ಹಾಗೂ ...
ಸಪ್ನಾ ಚೌಧರಿ
ಸಪ್ನಾ ಚೌಧರಿ
Updated on
ನವದೆಹಲಿ: ನಾನು ಬಿಜೆಪಿ ಸೇರ್ಪಡೆಯಾಗಿಲ್ಲ, ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ನನ್ನ ಉತ್ತಮ ಸ್ನೇಹಿತ ಹೀಗಾಗಿ ಅವರ ಪರ ಪ್ರಚಾರದಲ್ಲಿ ಭಾಗವಹಿಸಿರುವುದಾಗಿ ನಟಿ ಹಾಗೂ ಡ್ಯಾನ್ಸರ್  ಸಪ್ನಾ ಚೌಧರಿ ಹೇಳಿದ್ದಾರೆ.
ಈಶಾನ್ಯ ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಮನೋಜ್ ತಿವಾರಿ ಪರ ಪ್ರಚಾರದಲ್ಲಿ ಸಪ್ನಾ ಚೌಧರಿ ಕಾಣಸಿಕೊಂಡಿದ್ದರು,
ಬಿಗ್ ಬಾಸ್ ಮಾಜಿ ಸ್ಪರ್ಧಿ ಸಪ್ನಾ ಚೌಧರಿ ರಾಜಕೀಯಕ್ಕೆ ಸೇರುತ್ತಾರೆ ಎಂದು ಕಳೆದ ತಿಂಗಳು ಭಾರೀ ಊಹಾ ಪೋಹಗಳು ಹರಿದಾಡಿದ್ದವು.ಆಕೆ ಕಾಂಗ್ರೆಸ್ ಸೇರಿದ್ದಾರೆ, ಕಾಂಗ್ರೆಸ್ ಸೇರ್ಪಡೆಯಾದ ಪತ್ರಗಳ ಮೇಲೆ ಆಕೆ ಸಹಿ ಮಾಡಿರುವ ಫೋಟೋಗಳು ಇಂಟರ್ ನೆಟ್ ನಲ್ಲಿ ಹರಿದಾಡಿದ್ದವು, ಆ ನಂತರ ತಾವು ಯಾವ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದ್ದರು.
ಇದಾದ ನಂತರ ಸಪ್ನಾ ಚೌಧರಿ ಮನೋಜ್ ತಿವಾರಿ ಅವರನ್ನು ಭೇಟಿಯಾಗಿದ್ದರು, ತಮ್ಮ ಪರ ಪ್ರಚಾರ ಮಾಡಲು  ಸಪ್ನಾ ಚೌಧರಿ ಬಂದರೇ ನಮಗೆ ತುಂಬಾ  ಸಂತೋಷದ ವಿಷಯ, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಮನೋಜ್ ತಿವಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com