ನವದೆಹಲಿ: ಆಡಳಿತಾ ರೂಢ ಬಿಜೆಪಿ ನಿರೀಕ್ಷೆಯಂತೆಯೇ ಇಂದು ತನ್ನ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಿದ್ದು, 36 ಅಭ್ಯರ್ಥಿಗಳು ಹಾಗೂ ಅವರ ಕ್ಷೇತ್ರ ಪಟ್ಟಿ ಮಾಡಲಾಗಿದೆ. ಅಂತೆಯೇ ಏಪ್ರಿಲ್ 11ರಂದು ಆಂಧ್ರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಇಲ್ಲಿ ಒಟ್ಟು 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಅಂತೆಯೇ ಮಹಾರಾಷ್ಟ್ರದ ಆರು ಕ್ಷೇತ್ರಗಳಿಗೆ ಮತ್ತು ಒಡಿಶಾದ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಇದಲ್ಲದೆ ಅಸ್ಸಾಂ ಮತ್ತು ಮೇಘಾಲಯದಲ್ಲಿ ತಲಾ ಓರ್ವ ಅಭ್ಯರ್ಥಿಗಳನ್ನು ಹೆಸರಿಸಲಾಗಿದ್ದು, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಒಡಿಶಾದ ಪುರಿಯಿಂದ ಸ್ಪರ್ಧಿಸಲಿದ್ದಾರೆ.