ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿನ ಸುದ್ದಿಗಳು, ಬರಹಗಳು ಅಭಿಪ್ರಾಯಗಳನ್ನು, ಅಜೆಂಡಾಗಳನ್ನು ಬಿಂಬಿಸಬಾರದು. ಅಂತೆಯೇ ಯಾವುದೇ ವ್ಯಕ್ತಿ, ಪಕ್ಷ ಅಥವಾ ಸಂಘಟನೆಯ ಪರ-ವಿರೋಧ ಅಭಿಪ್ರಾಯಗಳನ್ನು ಬರಹಗಳನ್ನು ಪ್ರಸಾರ ಮಾಡಬಾರದು ಎಂದು ಆಯೋಗ ಹೇಳಿದೆ. ಅಂತೆಯೇ ಚುನಾವಣಾ ಆಯೋಗ ವೀಕ್ಷಣಾ ತಂಡವನ್ನು ನೇಮಕ ಮಾಡಿದ್ದು, ಅಧಿಕಾರಿಗಳು ವಾಹಿನಿಗಳು, ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹ ವಾಹಿನಿ, ಪತ್ರಿಕೆ, ವೆಬ್ ಸೈಟ್ ಸಾಮಾಜಿಕ ಜಾಲತಾಣಗಳ ವಿರುದ್ಧ ಎನ್ ಬಿಎಸ್ ಎ (News Broadcasting Standards Authority) ದೂರು ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.