ನಾನು ಯಾವುದೇ ರಾಜಕೀಯ ಪಕ್ಷ ಸೇರಿಲ್ಲ: ಕಾಂಗ್ರೆಸ್ ಸೇರ್ಪಡೆ ನಿರಾಕರಿಸಿದ ಸಪ್ನಾ ಚೌಧರಿ!

ಹರ್ಯಾಣದ ಖ್ಯಾತ ಹಾಡುಗಾರ್ತಿ ಹಾಗೂ ನೃತ್ಯಗಾರ್ತಿ ಮತ್ತು ನಟಿ ಸಪ್ನಾ ಚೌಧರಿ ತಾನು ಕಾಂಗ್ರೆಸ್ ಸೇರಿಲ್ಲ, ಪಕ್ಷದ ಸದಸ್ಯತ್ವ ಅರ್ಜಿಗೆ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಪ್ನಾ ಚೌಧರಿ
ಸಪ್ನಾ ಚೌಧರಿ
ನವದೆಹಲಿ: ಹರ್ಯಾಣದ ಖ್ಯಾತ ಹಾಡುಗಾರ್ತಿ ಹಾಗೂ ನೃತ್ಯಗಾರ್ತಿ ಮತ್ತು ನಟಿ ಸಪ್ನಾ ಚೌಧರಿ ತಾನು ಕಾಂಗ್ರೆಸ್ ಸೇರಿಲ್ಲ, ಪಕ್ಷದ ಸದಸ್ಯತ್ವ ಅರ್ಜಿಗೆ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಪ್ನಾ ಚೌಧರಿ ಕಾಂಗ್ರೆಸ್ ಸೇರಿದ್ದಾರೆ, ಅವರು ಮಥುರಾದಿಂದ ಲೋಕಸಭಾ ಕಣದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗೆ ಸಪ್ನಾ ಈ ಸ್ಪಷ್ಟನೆ ಕೊಟ್ಟಿದ್ದಾರೆ.
ಮಾದ್ಯಮದಲ್ಲಿ ಹರಿದಾಡುತ್ತಿರುವ ಪ್ರಿಯಾಂಕಾ ಗಾಂಧಿ ಜತೆಗಿನ ಫೋಟೋ ಬಹಳ ಹಳೆಯದಾಗಿದ್ದು ಈಗ ಣಾನು ಯಾವುದೇ ಪಕ್ಷ ಸೇರಿಲ್ಲ, ಯಾವ ಪಕ್ಷದ ಪರ ಪ್ರಚಾರ ನಡೆಸುವುದಿಲ್ಲ ಎಂದು ಅವರು ಹೇಳೀದ್ದಾರೆ.
"ನಾನೊಬ್ಬ ಕಲಾವಿದೆ, ನಾನು ಎಲ್ಲಾ ರಾಝಕೀಯ ಪಕ್ಷದ ನಾಯಕರನ್ನು ಭೇಟಿಯಾಗಿದ್ದೇನೆ, ಆದರೆ ಯಾವ ಪಕ್ಷವನ್ನೂ ಸೇರಿಲ್ಲ, ಹಾಗೊಂದುವೇಳೆ ಸೇರುವುದಾದರೆ ಬಹಿರಂಗವಾಗಿ ಸೇರ್ಪಡೆಯಾಗುತ್ತೇನೆ"
ಶನಿವಾರ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಸಪ್ನಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಅವರೊಡನಿದ್ದ ಫೋಟೋ ಒಂದನ್ನು ಟ್ವೀಟ್ ಮಾಡಿ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com