ಪ್ರಧಾನಿ ಮೋದಿ ಅವರ ಈ ಹೇಳಿಕೆ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಈಗ ಈ ಪ್ರಕರಣದಲ್ಲೂ ಮೋದಿಗೆ ಕ್ಲೀನ್ ಚಿಟ್ ಲಭಿಸಿದೆ. ಇದಕ್ಕೂ ಮುನ್ನ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವುದಕ್ಕೆ ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವುದು ಕಾರಣ ಎಂದು ಹೇಳಿದ್ದಕ್ಕಾಗಿಯೂ, ಅದಕ್ಕೂ ಮುನ್ನ ಲಾತೂರ್ ನಲ್ಲಿ ನಿಮ್ಮ ಮೊದಲ ಮತವನ್ನು ಸರ್ಜಿಕಲ್ ಸ್ಟ್ರೈಕ್, ಪುಲ್ವಾಮ ಹಿರೋಗಳಿಗೆ ಸಮರ್ಪಿಸಿ ಎಂದು ಯುವಜನತೆಗೆ ಕರೆ ನೀಡಿದ್ದಕ್ಕಾಗಿಯೂ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಈಗ ಈ ಮೂರೂ ಪ್ರಕರಣಗಳಲ್ಲಿ ಮೋದಿಗೆ ಕ್ಲೀನ್ ಚಿಟ್ ಸಿಕ್ಕಿದೆ.