ನವದೆಹಲಿ: ಇಂದು (ಮೇ 12) ಭಾರತ ಸಂಸದೀಯ ಚುನಾವಣೆಯ ಆರನೇ ಹಂತದ ಮತದಾನ ನಡೆಯುತ್ತಿದ್ದು ದೆಹಲಿ ಸೇರಿ ಏಳು ರಾಜ್ಯಗಳಲ್ಲಿ 10.7 ಕೋಟಿ ಮತದಾರರು ಮತಚಲಾವಣೆಗೆ ಸಿದ್ದವಾಗಿದ್ದಾರೆ.
ದೆಹಲಿಯ ಎಲ್ಲಾ ಏಳು ಕ್ಷೇತ್ರಗಳು, ಮಧ್ಯಪ್ರದೇಶದ ಭೋಪಾಲ್ ಸೇರಿ ಹಲವು ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಭೋಪಾಲ್ ನಲ್ಲಿ ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ಹಾಗೂ ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.
ಇನ್ನು ದೆಹಲಿಲಿಯಲ್ಲಿ ಆಮ್ ಆದ್ಮಿ ಪಾರ್ಟಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಾಡಾಗಿದೆ. ಕಾಂಗ್ರೆಸ್ ನ ಶೀಲಾ ದೀಕ್ಷಿತ್, ಬಿಜೆಪಿಯ ಗೌತಮ್ ಗಂಭೀರ್, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸೇರಿ ಅನೇಕ ಪ್ರಮುಖರು ಕಣದಲ್ಲಿದ್ದಾರೆ.
ಇದಷ್ಟೇ ಅಲ್ಲದೆ ಜ್ಯೋತಿರಾದಿತ್ಯ ಸಿಂಧ್ಯಾ, ಕೆ.ಪಿ. ಯಾದವ್, ಮನೇಕಾ ಗಾಂಧಿ, ಸಂಜಯ್ ಸಿಂಗ್, ಅಖಿಲೇಶ್ ಯಾದವ್, ದಿನೇಶ್ ಲಾಲ್ ಯಾದವ್ ಮೊದಲಾದವರು ಕಣದಲ್ಲಿನ ಪ್ರಮುಖ ನಾಯಕರಾಗಿದ್ದಾರೆ.