ಕರ್ನಾಟಕ

ಬಿಸಿಲಿಗೆ ಬಂದು ನೋಡಲಿ ಎಂದಿದ್ದ ಸಿಎಂ: ಎಚ್ ಡಿಕೆಗೆ ನಟ ಯಶ್ ಭರ್ಜರಿ ತಿರುಗೇಟು!

ಬಿಸಿಲಿಗೆ ಬಂದು ನೋಡಲಿ ಎಂದಿದ್ದ ಸಿಎಂ: ಎಚ್ ಡಿಕೆಗೆ ನಟ ಯಶ್ ಭರ್ಜರಿ ತಿರುಗೇಟು!
ಮಂಡ್ಯದಲ್ಲಿ ಪ್ರಚಾರ ನಡೆಸಿದ ನಟ ಯಶ್
Published On :
ಬೆಂಗಳೂರು: ಇಡೀ ಕರ್ನಾಟಕದಲ್ಲಿಯೇ ಮಂಡ್ಯ ಲೋಕಸಭೆ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಹಾಗೂ ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿ ತಾರಕಕ್ಕೇರಿದೆ. ಇಬ್ಬರ ಪರವಾಗಿ ಪ್ರಚಾರ ನಡೆಸುತ್ತಿರುವವರು ಕೊಡುತ್ತಿರುವ ಏಟು-ತಿರುಗೇಟು ಭಾರೀ ಸದ್ದು ಮತ್ತು ಸುದ್ದಿ ಮಾಡುತ್ತಿದೆ.
ನಿನ್ನೆ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದ ವೇಳೆ ನಟ ಯಶ್ ಸಿಎಂ ಹೇಳಿಕೆಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇವು ಶೋಕಿ ಎತ್ತುಗಳು ಬಿಸಿಲಿಗೆ ಬರಲ್ಲ" ಎಂಬ ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಯಶ್​​, ನಮಗೆ ಬಿಸಿಲು ಹೊಸದೇನಲ್ಲ ಎಂದಿದ್ಧಾರೆ. ಅಷ್ಟೇ ಅಲ್ಲದೇ ನಮ್ಮಪ್ಪ ಡ್ರೈವರ್​​​, ನಾನು ಡ್ರೈವರ್​​ ಮಗ. ಹೀಗಾಗಿ ನಮಗೆ ಬಿಸಿಲು ಹೊಸದಲ್ಲ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ಧಾರೆ.
ನಟ ಯಶ್​​, ಬಿಸಿಲಿಗೆ ಬರಬೇಕೆಂದು ತೋರಿಸಿಕೊಡೋರು ಜನ. ನಮಗೆ ಬಿಸಿಲು ಹೊಸದೇನಲ್ಲ. ರೋಡ್ನಲ್ಲಿ ಗಲ್ಲಿ ಕ್ರಿಕೆಟ್, ಬುಗುರಿ ಆಡಿ ಬೆಳೆದವನು. ನಾನು ಡ್ರೈವರ್ ಮಗ, ನಮಗೆ ಬಿಸಿಲು ಹೊಸದಲ್ಲ. ಸರ್ಕಾರಿ ಬಸ್ಸಲ್ಲಿ ಓಡಾಡಿಯೇ ಇಲ್ಲಿಗೆ ಬಂದವರು ನಾವು. ಮತ್ತೆ ಬಿಸಿಲಿಗೆ ಬರೋಕೆ ನನಗೇನೂ ಸಮಸ್ಯೆ ಇಲ್ಲ. ಆದರೆ, ಹುಟ್ಟಿದಾಗಿನಿಂದ ನೆರಳಲ್ಲೇ ಇದ್ದವರು ಯಾರು? ಹೀಗೆ ಬೆಳೆದವರು ಮಾತ್ರ ಬಿಸಿಲು ಬಗ್ಗೆ ಯೋಚಿಸಬೇಕು ಎಂದು ಸಿಎಂ ಹೇಳಿಕೆಗೆ ಭರ್ಜರಿಯಾಗಿಯೇ ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.