ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ 2019ರ ಲೋಕಸಭೆ ಚುನಾವಣಾ ಪ್ರಣಾಳಿಕೆ ಸಿದ್ದಪಡಿಸುತ್ತಿವೆ.
ರಾಜ್ಯದ ಒಟ್ಟಚು 28 ಕ್ಷೇತ್ರಗಳ ಪೈಕಿ 21 ರಲ್ಲಿ ಕಾಂಗ್ರೆಸ್ ಮತ್ತು 7ರಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದೆ, ಕಳೆದ ಕೆಲವು ದಿನಗಳಿಂದ ಎರಡು ಪಕ್ಷಗಳ ಮುಖಂಡರು ಪ್ರಣಾಳಿಕೆಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಬುಧವಾರ ಸಂಜೆ ಎರಡು ಪಕ್ಷಗಳ ಮುಖಂಡರು ಸಭೆ ನಡೆಸಿದ್ದಾರೆ.
ಜೆಡಿಎಸ್ ಸರ್ವೋಚ್ಛ ನಾಯಕ ಎಚ್,ಡಿ ದೇವೇಗೌಡ ಕೃಷ್ಣ ಬೈರೇಗೌಡ ಮತ್ತು ಕಾಂಗ್ರೆಸ್ ಜೆಡಿಎಸ್ ಮುಖಂಡರು ಹಾಗೂ ಆಭ್ಯರ್ಥಿಗಳ ಜೊತೆ ಸಭೆ ನಡೆಸಿದ್ದಾರೆ,
ಕಾಂಗ್ರೆಸ್-ಬಿಜೆಪಿ ತಂತಮ್ಮ ಪ್ರಣಾಳಿಕೆಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿವೆ.
ಅಂತೆಯೇ ರಾಜ್ಯಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಜಂಟಿಯಾಗಿ ಪ್ರತ್ಯೇಕವಾಗಿ ಜಂಟಿ ಪ್ರಣಾಳಿಕೆಯನ್ನು ತಯಾರು ಮಾಡುತ್ತಿದೆ. ಅದೂ ಸಹ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 31ರಂದು ತುಮಕೂರು ರಸ್ತೆಯ ಬಿಐಇಸಿ ಮೈದಾನದಲ್ಲಿ ನಡೆಯುವ ರ್ಯಾಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.