ತುಮಕೂರಿನಲ್ಲಿ ನೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ನಾಲಗೆ ಹರಿಬಿಟ್ಟಿದ್ದಾರೆ. ಒಂದೊಂದು ವೋಟು ಕೂಡ ಮುಖ್ಯ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ನನ್ಮಕ್ಳು ಜೆಡಿಎಸ್‍ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದಾರೆ.