ಹ್ಯಾರಿ ಕೇನ್‌ ಹ್ಯಾಟ್ರಿಕ್ ಗೋಲು, ಪನಾಮಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

ವಿಶ್ವ ಪ್ರಸಿದ್ದ ಫಿಫಾ ಫುಟ್ಬಾಲ್ ಸರಣಿಯಲ್ಲಿ ಭಾನುವಾರ ನಡೆದ ಇಂಗ್ಲೆಡ್-ಪನಾಮಾ ನಡುವಿನ ಹಣಾಹಣಿಯಲ್ಲಿ ಇಂಗ್ಲೆಂಡ್ 6-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.
ಹ್ಯಾರಿ ಕೇನ್‌ ಹ್ಯಾಟ್ರಿಕ್ ಗೋಲು, ಪನಾಮಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ
ಹ್ಯಾರಿ ಕೇನ್‌ ಹ್ಯಾಟ್ರಿಕ್ ಗೋಲು, ಪನಾಮಾ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ
Updated on
ನಿಜ್ನಿ ನೊವ್‌ಗರೊಡ್‌ (ರಷ್ಯಾ): ವಿಶ್ವ ಪ್ರಸಿದ್ದ ಫಿಫಾ ಫುಟ್ಬಾಲ್ ಸರಣಿಯಲ್ಲಿ  ಭಾನುವಾರ ನಡೆದ ಇಂಗ್ಲೆಡ್-ಪನಾಮಾ ನಡುವಿನ ಹಣಾಹಣಿಯಲ್ಲಿ ಇಂಗ್ಲೆಂಡ್ 6-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.
ಈ ಜಯದೊಡನೆ ಇಂಗ್ಲೆಂಡ್ ಪ್ರಿ ಕ್ವಾರ್ಟರ್ ಹಂತ ಪ್ರವೇಶಿಸಿದ್ದು ತಂಡದ ನಾಯಕ ಹ್ಯಾರಿ ಕೇನ್‌ ಹ್ಯಾಟ್ರಿಕ್ ಗೋಲು ದಾಖಲಿಸುವ ಮೂಲಕ ಇಂಗ್ಲೆಂಡ್ ವಿಜಯದ ನಗೆ ಬೀರಲು ನೆರವಾದರು.
ಹ್ಯಾರಿ 22, 45+1 ಮತ್ತು 62ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು. ಇದರಲ್ಲಿ ಮೊದಲೆರಡು ಗೋಲುಗಳು ಪೆನಾಲ್ಟಿ ಶೂಟ್ ಗಳಾಗಿದ್ದವು. ಇನ್ನು ಇಂಗ್ಲೆಂಡ್ ಪರವಾಗಿ ಜಾನ್ ಸ್ಟೋನ್ಸ್  8ನೇ ಹಾಗೂ 40ನೇ ನಿಮಿಷಗಳಲ್ಲಿ 2 ಗೋಲು ಗಳನ್ನು ದಾಖಲಿಸಿದ್ದರೆ ಜೆಸ್ಸೆ ಲಿಂಗಾರ್ಡ್(36ನೇ ನಿಮಿಷ) ಒಂದು ಗೋಲು ಗಳಿಸಿಕೊಟ್ಟರು.
ಇಂಗ್ಲೆಂಡ್ ನಾಯಕ ಹ್ಯಾರಿ ಈ ಪಂದ್ಯದ ಹ್ಯಾಟ್ರಿಕ್ ಗೋಲು ದಾಖಲೆಯೊಡನೆ ವಿಶ್ವಕಪ್ ಸರಣಿಯಲ್ಲಿ 5 ಗೋಲುಗಳನ್ನು ಗಳಿಸಿದ ಪ್ರಥಮಿಗರಾಗಿದ್ದಾರೆ. ಅವರು ಗೋಲು ಗಳಿಕೆ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ, ರೊಮೇಲು ಲುಕಾಕು  ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಪನಾಮಾ ಪರವಾಗಿ  ಫಿಲಿಪೆ  ಬಲಾಯ್ (78ನೇ ನಿಮಿಷ) ಏಕೈಕ ಗೋಲು ದಾಕಲಿಸಿದ್ದರು. ವಿಶೇಷವೆಂದರೆ ವಿಶ್ವಕಪ್ ಪಂದ್ಯದಲ್ಲಿ ಪನಾಮಾ ತಂಡ ದಾಖಲಿಸಿದ್ದ ಪ್ರಥಮ ಗೋಲು ಇದಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com