ಫಿಫಾ ವಿಶ್ವಕಪ್ 2014

ಫಿಫಾದಿಂದ ಸೂರೆಜ್ ಮಾನವ ಹಕ್ಕು ಉಲ್ಲಂಘನೆ: ಆರೋಪ

ಫಿಫಾದಿಂದ ಸೂರೆಜ್ ಮಾನವ ಹಕ್ಕು ಉಲ್ಲಂಘನೆ: ಆರೋಪ
Published On :

ಬ್ರಾಸಿಲಿಯಾ: ಉರುಗ್ವೆ ತಂಡದ ಆಟಗಾರ ಲೂಯಿಸ್ ಸೂರೆಜ್ ಅವರು ಲೀಗ್ ಹಂತದ ಪಂದ್ಯದಲ್ಲಿ ಇಟಲಿ ತಂಡದ ಜಾರ್ಜಿಯೋ ಚಿಲಿನಿಗೆ ಕಚ್ಚಿದ ಘಟನೆ ವಿಶ್ವಕಪ್ ಪಂದ್ಯಾವಳಿಯಲ್ಲೇ ಕೆಟ್ಟ ಘಟನೆಯಾಗಿರಬಹುದು. ಆದರೆ, ಆ ಘಟನೆಯ ಹಿನ್ನೆಲೆಯಲ್ಲಿ ಸೂರೆಜ್‌ಗೆ ಫಿಫಾ ನಿಷೇಧ ಹೇರಿರುವುದನ್ನು ಉರುಗ್ವೆ ರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆ ಖಂಡಿಸಿದೆ. ಸೂರೆಜ್ ಮೇಲೆ ನಾಲ್ಕು ತಿಂಗಳು ಯಾವುದೇ ಫುಟ್ಬಾಲ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿರುವುದು, ಫಿಫಾದಿಂದ ಅವರ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗಿದೆ. ಅಲ್ಲದೆ ಇದೊಂದು ಅಮಾನವೀಯ ಘಟನೆ ಎಂದು ಅದು ಆರೋಪ ಮಾಡಿದೆ.

ಇಟಲಿ ಆಟಗಾರ ಚಿಲಿನಿ ಅವರಿಗೆ ಕಚ್ಚಿದ ಪ್ರಕರಣದಲ್ಲಿ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಉರುಗ್ವೆ ತಂಡದ ಆಟಗಾರ ಲೂಯಿಸ್ ಸೂರೆಜ್ ಅವರ ಆಕೃತಿಯನ್ನು ಬಾಟೆಲ್‌ಗಳ ಮುಚ್ಚುಳ ತೆಗೆಯಲು ಬಳಸುವಂತೆ ವೆಬ್‌ಸೈಟ್‌ವೊಂದರಲ್ಲಿ ವ್ಯಂಗ್ಯವಾಗಿ ಚಿತ್ರಿಸಿರುವ ಪರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.