ಮರಡೋನಾ ಮುತ್ತುತ್ತಿರುವ ಬ್ರೆಜಿಲ್ ಅಭಿಮಾನಿಗಳು

ಸಾವೊ ಪೊಲೊ: ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ಅಭಿಮಾನಿಗಳು ಅರ್ಜೆಂಟೀನಾದ ಮಾಜಿ ಫುಟ್ಬಾಲ್ ದಂತಕತೆ ಡಿಗೋ ಮರಡೋನಾ ಅವರನ್ನು ಮುತ್ತಿಕೊಳ್ಳುತ್ತಿದ್ದಾರಂತೆ. ಉದ್ಘಾಟನಾ ಪಂದ್ಯದಲ್ಲೇ ಅಭಿಮಾನಿಗಳಿಂದ ಬಿಡಿಸಿಕೊಳ್ಳಲು ಮರಡೋನಾ ಒದ್ದಾಡಿದ್ದಾರಂತೆ.
ಹೀಗಾಗಿ ಪಂದ್ಯ ನಡೆಯುವಾಗಿ ತಮ್ಮನ್ನು ಮುತ್ತಿಕೊಳ್ಳುವ ಅಭಿಮಾನಿಗಳಿಂದ ತಪ್ಪಿಸಿಕೊಂಡು ಸ್ಥಾನ ಹುಡುಕಿಕೊಳ್ಳುವುದೇ ಮರಡೋನಾಗಿ ಸಮಸ್ಯೆಯಾಗಿ ಪರಿಣಮಿಸಿದೆಯಂತೆ. ಅಭಿಮಾನಿಗಳಿಂದ ಅವರನ್ನು ರಕ್ಷಿಸಿದ್ದು, ಕಟ್ಟಡ ನಿರ್ಮಾಣ ಕಂಪನಿಯೊಂದರು ಉದ್ಯೋಗಿಗಳು. ಮರಡೋನಾ ಅವರನ್ನು ಅಭಿಮಾನಿಗಳಿಂದ ಬೇರ್ಪಡಿಸುವ ಮೂಲಕ ವಿಐಪಿ ಬಾಕ್ಸ್ಗೆ ಕರೆದುಕೊಂಡು ಹೋದರಂತೆ. ಈ ಸಮಯದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ, 1986ರಲ್ಲಿ ಅರ್ಜೆಂಟೀನಾಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಮರಡೋನಾ ಪಂದ್ಯಾವಳಿಯಲ್ಲಿ ಬ್ರೆಜಿಲ್ ವಿಜಯ ಸಾಧಿಸಲಿದೆ ಎಂದು ಹೇಳಿದ್ದಾರೆ. 'ಆತಿಥೇಯ ತಂಡದ ರಕ್ಷಣಾ ವಿಭಾಗ ನೀಡಿದ ಪ್ರದರ್ಶನ ನನಗೆ ಇಷ್ಟವಾಗಲಿಲ್ಲ. ಆದರೆ, ನೇಮಾರ್ ಸೇರಿದಂತೆ ಮುನ್ನಡೆ ವಿಭಾಗ ಶ್ರೇಷ್ಠ ಎಂದು ಮರಡೋನಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


