ಆನ್ಲೈನಲ್ಲಿ ಬೆತ್ತಲಾದ ಕ್ರೊವೇಷಿಯಾ ಆಟಗಾರರು!

ಸಾಲ್ವಾಡೋರ್ (ಬ್ರೆಜಿಲ್): ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ ಸೋಲನುಭವಿಸಿದ್ದ ಕ್ರೊವೇಷಿಯಾ ಆಟಗಾರರಿಗೆ ಅಷ್ಟೊಂದು ಮುಜುಗರವಾಗಿರಲಿಲ್ಲವೇನೊ? ಆದರೆ, ತಮ್ಮ ಬೆತ್ತಲೆ ಚಿತ್ರಗಳು ಈಗ ಆನ್ಲೈನ್ನಲ್ಲಿ ಹರಿದಾಡುತ್ತಿರುವುದು ಅವರಿಗೆ ಇಲ್ಲದ ಮುಜುಗರ ಉಂಟುಮಾಡಿವೆ. ಇದು ಆಟಗಾರರ ತಪ್ಪಲ್ಲ ಬಿಡಿ. ಪಾಪ ಮೊದಲ ಪಂದ್ಯದಲ್ಲೇ ಸೋತ ಆಟಗಾರರು ಚಿಂತೆಯಲ್ಲಿ ಮುಳುಗಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಆಟಗಾರರು ತಂಗಿದ್ದ ಹೋಟೆಲ್ಗೆ ಪ್ರವೇಶಿಸಿ ಅವರು ಸ್ನಾನ ಮಾಡುತ್ತಿದ್ದಾಗ ಕದ್ದು ಬೆತ್ತಲೆ ಚಿತ್ರ ತೆಗೆದು ಅವನ್ನು ಆನ್ಲೈನ್ನಲ್ಲಿ ಹರಿದಾಡುವಂತೆ ಮಾಡಿದ್ದಾರೆ.ಆದರೆ, ಈ ಕೃತ್ಯದ ಕುರಿತು ಮಾಧ್ಯಮದೊಂದಿಗೆ ಮಾತನಾಡಲು ಕ್ರೊವೇಷಿಯಾ ಆಟಗಾರು ನಿರಾಕರಿಸಿದ್ದಾರೆ. 'ಅನಾಮಿಕರು ನಿಮ್ಮ ಬೆತ್ತಲೆ ಚಿತ್ರವನ್ನು ತೆಗೆದರೆ, ಆ ಬಗ್ಗೆ ನಿಮಗೆ ಹೇಗನಿಸುತ್ತದೆ. ಇಂತಹ ಸಂದರ್ಭದಲ್ಲಿ ಆಟಗಾರರು ನಿಮ್ಮೊಂದಿಗೆ ಹೇಗೆ ಮಾತನಾಡುತ್ತಾರೆ?' ಎಂದು ತಂಡದ ಕೋಚ್ ನಿಕೊ ಕೊವಾಚ್ ಗೊಷ್ಠಿಯೊಂದರಲ್ಲಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


