ಉದ್ದಿನ ಬೇಳೆಯನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆ ಹಾಕಿರಿ.
ನಂತರ ಹಸಿಮೆಣಸಿನಕಾಯಿ, ಉಪ್ಪು, ಶುಂಠಿ ಬೆರೆಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಈಗ ಎಣ್ಣೆಯನ್ನು ಕಾಯಿಸಿ ಉದ್ದಿನ ವಡೆಗಳನ್ನು ಹೊಂಬಣ್ಣದಂತೆ ಕರಿಯಿರಿ ನಂತರ ತೆಗೆದಿಡಿರಿ.
ಮೊಸರು ಕಡೆದು ಕರಿದ ವಡೆಗಳನ್ನು ಅದರಲ್ಲಿ ಹಾಕಿ ನೆನೆಹಾಕಿರಿ. ಅರ್ಧ ಗಂಟೆ ನಂತರ ಅದರ ಮೇಲೆ ಉಪ್ಪು ಸಿಂಪಡಿಸಿ. ಒಂದು ಊಟದ ಚಮಚಯಷ್ಟು ಎಣ್ಣೆ ಸಾಸಿವೆ. ಇಂಗು ಮತ್ತು ಕರಿಬೇವು ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿ ಅದನ್ನು ಮೊಸರು ವಡೆಗೆ ಬೆರೆಸಿ. ಈಗ ಮೊಸರು ವಡೆ ಸಿದ್ಧವಾಗುತ್ತದೆ.