ರವೆ ಮತ್ತು ಹುರಿಗಡಲೆಪುಡಿಯನ್ನು ತವಾದಲ್ಲಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಶುಂಠಿ, ಹಸಿಮೆಣಸು ಮತ್ತು ಕರಿಬೇವಿನ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು
ಇನ್ನು ಒಂದು ಚಮಚದಷ್ಟು ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಂಡು ನಂತರ ಇದಕ್ಕೆ ಸಾಸಿವೆಯನ್ನು ಹಾಕಿ ಇದು ಸಿಡಿಯುತ್ತಿದ್ದಂತೆ ಶುಂಠಿ, ಹಸಿಮೆಣಸು, ಕರಿಬೇವಿನ ಸೊಪ್ಪನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು.
ತದನಂತರ ಇದಕ್ಕೆ ಇಂಗು, ಅರಿಶಿಣದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ತೆಂಗಿನ ಕಾಯಿಯನ್ನು ಈ ಮಿಶ್ರಣಕ್ಕೆ ಸೇರಿಸಿ, ಕಾಯಿ ಚಿನ್ನದ ಬಣ್ಣಕ್ಕೆ ಬರುತ್ತಿದ್ದಂತೆ ಮೆಣಸಿನ ಪುಡಿಯನ್ನು ಸೇರಿಸಿ.
ಮೊದಲೇ ಹುರಿದಿಟ್ಟ ರವೆಗೆ ಈ ಮಿಶ್ರಣವನ್ನು ಸೇರಿಸಿ ಒಂದು ನಿಮಿಷ ಹಾಗೆಯೇ ಬಿಡಿ.
ಮೈದಾ, ಎಣ್ಣೆ, ಉಪ್ಪು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಹಿಟ್ಟು ನಾದಿಕೊಳ್ಳಿ ಈ ಹಿಟ್ಟನ್ನು ನಾದಿ 15 ನಿಮಿಷಗಳ ಕಾಲ ಮುಚ್ಚಿಡಿ.
15 ನಿಮಿಷದ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ. ಇದನ್ನು ಪೂರಿ ಆಕಾರದಲ್ಲಿ ಬಿಸ್ಕೆಟ್ ರೊಟ್ಟಿಯನ್ನು ಎಣ್ಣೆಗೆ ಹಾಕಿ. ಎರಡೂ ಬದಿ ಇದನ್ನು ಚೆನ್ನಾಗಿ ಸುಡಬೇಕು.
ನಂತರ ಚಿನ್ನದ ಬಣ್ಣಕ್ಕೆ ತಿರುಗಿರುವ ಬಿಸ್ಕೆಟ್ ರೊಟ್ಟಿಯನ್ನು ಬಾಣಲೆಯಿಂದ ತೆಗೆದು ತಟ್ಟೆಗೆ ಹಾಕಬೇಕು. ಈಗ ಸ್ವಾಧಿಷ್ಟಕರ ಬಿಸ್ಕೆಟ್ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.