ಚನ್ನಾವನ್ನು ಆರು ಗಂಟೆಗಳ ಕಾಲ ನೆನೆಸಿ. ತರಕಾರಿಗಳನ್ನು ನೀರಿನಿಂದ ತೊಳೆಯಿರಿ. ಗರಂ ಮಸಾಲೆಯ ಪದಾರ್ಥಗಳನ್ನೆಲ್ಲಾ ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ತರಕಾರಿಗಳನ್ನು ಹೆಚ್ಚಿಕೊಂಡು ಬೇಯಿಸಿ. ಚೆನ್ನಾ ನೆಂದ ಬಳಿಕ ಕುಕ್ಕರಿನಲ್ಲಿಟ್ಟು ಬೇಯಿಸಿರಿ. ಈರುಳ್ಳಿ ಮತ್ತು ಟೊಮೆಟೋವನ್ನು ಸಣ್ಣದಾಗಿಹೆಚ್ಚಿಬರೆ ಇಟ್ಟುಕೊಳ್ಳಿ.
ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಜೀರಿಗೆ ಹಾಕಿ ಸಿಡಿಸಿ ನಂತರ ಹೆಚ್ಚಿದ ಟೊಮೆಟೊ ಹಾಗೂ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ.
ಅದೇ ಬಾಣಲೆಗೆ ಬೇಯಿಸಿದ ತರಕಾರಿ ಹಾಗೂ ಕಾಳು ಹಾಕಿ ಗರಂ ಮಸಾಲೆ, ಮೆಣಸಿನಪುಡಿ, ಉಪ್ಪು ಹಾಕಿ ಕುದಿಸಿ. ಅದು ಚೆನ್ನಾಗಿ ಕುದ್ದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಆನಂತರ ಡ್ರೈಫ್ರೂಟ್ಸ್ ಗಳನ್ನು ಮಿಕ್ಸ್ ಮಾಡಿ. ಈಗ ರುಚಿಕರವಾದ ನವರತನ್ ಕುರ್ಮಾ ಸಿದ್ದ.