ನಂತರ ಕಡಲೆಗೆ 2 ಕಪ್ ನೀರು ಮತ್ತು ಉಪ್ಪು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ
ಈಗ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಶುಂಠಿ-ಬೆಳ್ಳುಳ್ಳು ಪೇಸ್ಟ್ ಹಾಕಿ ಒಂದು ನಿಮಿಷ ಫ್ರೈ ಮಾಡಿ
ನಂತರ ಖಾರದ ಪುಡಿ, ಅರಿಶಿಣದ ಪುಡಿ, ದನಿಯಾ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿ.
ನಂತರ ಕತ್ತರಿಸಿದ ಟೊಮೆಟೋ ಹಾಕಿ 4-5 ನಿಮಿಷ ಫ್ರೈ ಮಾಡಿ.
ನಂತರ ಬೇಯಿಸಿದ ಆಲುಗಡ್ಡೆ, ಹಸಿಮೆಣಸಿನಕಾಯಿ ಮತ್ತು ಮೊಸರು ಹಾಕಿ 5-6 ನಿಮಿಷ ಬೇಯಿಸಿ.
ಈಗ ಬೇಯಿಸಿದ ಕಡೆಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ರೇವಿ ರೆಡಿಯಾದ ಬಳಿಕ ಉರಿಯಿಂದ ಇಳಿಸಿ.
ಬಿರಿಯಾನಿ ತಯಾರು ಮಾಡಿಕೊಳ್ಳಬೇಕು
ಕೇಸರಿಯನ್ನು ಹಾಲಿನಲ್ಲಿ ನೆನೆ ಹಾಕಿ ಇಡಿ.
ಅನ್ನ ಮುಕ್ಕಾಲು ಭಾಗ ಬೆಂದಾಗ ಅದರ ನೀರು ಬಸಿಯಿರಿ. ನಂತರ ಆ ಅನ್ನಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ.
ಈಗ ಬಿರಿಯಾನಿ ಮಾಡುವ ಪಾತ್ರೆಗೆ ಎಣ್ಣೆ ಅಥವಾ ತುಪ್ಪ ಸವರಿ. ನಂತರ ಮುಕ್ಕಾಲು ಭಾಗ ಅನ್ನದಲ್ಲಿ ಸ್ವಲ್ಪ ಅನ್ನ ಹಾಕಿ ನಂತರ ಕಡಲೆ ಗ್ರೇವೆ ಹಾಕಿ. ನಂತರ ಪುನಃ ಅನ್ನ ಹಾಕಿ ದೊಡ್ಡ ಕಡಲೆಯ ಗ್ರೇವೆ ಹಾಕಿ. ಕೊನೆಯ ಪದರವಾಗಿ ಅನ್ನಹಾಕಿ ನಂತರ ಕೇಸರಿ ಹಾಲು ಹಾಕಿ.
ಅದರ ಮೇಲೆ ಉಳಿದ ಗ್ರೇವಿ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಚನಾ ಬಿರಿಯಾನಿ ರೆಡಿ.