

ಮನೆ ಮುಂದಿರುವ ತುಳಸಿ ಗಿಡ ಔಷಧ ರೂಪದಲ್ಲಿ ನಿಮಗೆ ಹೇಗೆಲ್ಲ ನೆರವಾಗಬಲ್ಲದು ಗೊತ್ತಾ?
ಗ್ರಹಣ ಕಾಲದಲ್ಲಿ 'ನೀರಿಗೆ ಒಂದು ತುಳಸಿ ದಳ ಹಾಕಿಡಿ' ಎನ್ನುತ್ತಾರೆ ಮನೆಯ ಹಿರಿಯರು. ಅದರ ಹಿಂದಿನ ಸರಳ ಕಾರಣ ಏನೆಂದರೆ ಗ್ರಹಣದ ವೇಳೆ ಹುಟ್ಟಿಕೊಳ್ಳಬಹುದಾದ ಸೂಕ್ಷ್ಮ ರೋಗಾಣುಗಳು ಜಲದಲ್ಲಿ ಜನಿಸದಿರಲಿ ಎಂದು!
ಮನೆ ಮುಂದೆ ತುಳಸಿ ಗಿಡ ನೆಡುವುದರ ಹಿಂದೆ ದೈವಿಕ ಭಾವನೆ ಮಾತ್ರವೇ ಇಲ್ಲ. ಎಲೆ, ಬೀಜ, ಕಾಂಡ ಹೀಗೆ ಪ್ರತಿಯೊಂದು ಭಾಗದಲ್ಲಿಯೂ ಔಷಧೀಯ ಗುಣಗಳನ್ನು ಹೊಂದಿರುವ ಗಿಡ ತುಳಸಿ. ಕ್ರಿಮಿಕೀಟಗಳನ್ನು ಓಡಿಸುವ ಸಾಮರ್ಥ್ಯವೂ ತುಳಸಿಗಿದೆ. ಕೃಷ್ಣ ತುಳಸಿ, ಶ್ವೇತ ತುಳಸಿ, ಕರ್ಪೂರ ತುಳಸಿ ಮೊದಲಾದ ಪ್ರಭೇದಗಳಿವೆ.
ತುಳಸಿಯ ಮಹಿಮೆ ಏನು ಗೊತ್ತಾ?
= ತುಳಸಿ ರಸವನ್ನು ಕಿವಿಯೊಳಗೆ ಬಿಟ್ಟರೆ ಕಿವಿ ನೋವು ಕಡಿಮೆಯಾಗುತ್ತದೆ.
= ತುಳಸಿ ಬೇರಿನಿಂದ ಕಷಾಯ ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
= ತುಳಸಿ ರಸ, ಶುಂಠಿ, ಜೇನುತುಪ್ಪ, ಈರುಳ್ಳಿ ರಸ ಇವುಗಳನ್ನು ಕಲಸಿಕೊಂಡು ಸೇವಿಸಿದರೆ ಶೀತ ಮಾಯವಾಗುತ್ತದೆ.
= ವಾತಕ್ಕೊಳಗಾದ ದೇಹದ ಭಾಗಕ್ಕೆ ತುಳಸಿ ರಸ ಹಚ್ಚಿದರೆ ವಾತ ಕಡಿಮೆಯಾಗುವುದು.
= ತುಳಸಿ ರಸದೊಂದಿಗೆ ಶುಂಠಿ ರಸ ಸೇರಿಸಿ ಕುಡಿದರೆ ಹೊಟ್ಟೆನೋವು ಮಾಯ.
= ಕೃಷ್ಣ ತುಳಸಿಯ ರಸವನ್ನು ಜೇನಿನೊಂದಿಗೆ ಕಲಸಿ ಸೇವಿಸಿದರೆ ಕೆಮ್ಮು ಶಮನಗೊಳ್ಳುವುದು.
= ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಬೇಯಿಸಿ ನಂತರ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.
= ತುಳಸಿ ರಸವನ್ನು ಜೇನುತುಪ್ಪದೊಂದಿಗೆ ನಿಯಮಿತವಾಗಿ ಆರು ತಿಂಗಳು ಸೇವಿಸಿದರೆ ಕಿಡ್ನಿಯಲ್ಲಿನ ತೊಂದರೆಯನ್ನು ಹೋಗಲಾಡಿಸಬಹುದು.
= ಜೇನುತುಪ್ಪದೊಂದಿಗೆ ತುಳಸಿ ರಸ ಸೇವಿಸಿದರೆ ಬೊಜ್ಜಿಗೆ ಬೈ ಹೇಳಬಹುದು.
-ವಿಜಯ್. ಆರ್. ಹೊಸನಗರ