ಹೀಗೆ ಮಾಡಿ: ಮೊದಲಿಗೆ ಸಾಲಂಬ ಶಿರ್ಷಾಸನ ಸ್ಥಿತಿಗೆ ಬನ್ನಿ. ಬಳಿಕ ಉಸಿರನ್ನು ಹೊರಗೆ ಬಿಟ್ಟು ಬೆನ್ನು ಮೂಳೆಯನ್ನು ಬಲಪಕ್ಕಕ್ಕೆ ತಿರುಗಿಸುವುದು ಮಾತ್ರವಲ್ಲದೆ, ತಲೆ ಮತ್ತು ಕೈಗಳನ್ನು ಹೊರತಪಡಿಸಿ ಉಳಿದ ದೇಹದ ಭಾಗವನ್ನು ಬಲಪಕ್ಕಕ್ಕೆ ತಿರುಗಿಸಿ. ನಂತರ ಕಾಲುಗಳನ್ನು 90 ಡಿಗ್ರಿಯಲ್ಲಿ ತಿರುಗಿಸಿ. ಈ ಸ್ಥಿತಿಯಲ್ಲಿ 20ರಿಂದ 30 ಸೆಕೆಂಡುಗಳ ಕಾಲ ಇರಲು ಯತ್ನಿಸಿ. ಸಹಜವಾಗಿ ಉಸಿರಾಡುತ್ತಿರಿ. ಬಳಿಕ ಮತ್ತೆ ಸಾಲಂಬ ಶಿರ್ಷಾಸನ ಸ್ಥಿತಿಗೆ ಮರಳಿ ಎಡಪಕ್ಕಕ್ಕೂ ಇದೇ ರೀತಿ ಮಾಡಿ. ನಂತರ ನಿಧಾನವಾಗಿ ಕಾಲುಗಳನ್ನು ಕೆಳಕ್ಕೆ ಬಿಟ್ಟು ವಿಶ್ರಮಿಸಿಕೊಳ್ಳಿ.
ಪ್ರಯೋಜನ: ಬೆನ್ನುಮೂಳೆಗೆ ಬಲ ಬರುವುದು. ಬೆನ್ನಿಗೆ ಸ್ಥಿತಿಸ್ಥಾಪಕತ್ವ ದೊರೆಯುವುದು.