ಸುಖದ ಸುಪ್ಪತ್ತಿಗೆ

ಸುಖದ ಸುಪ್ಪತ್ತಿಗೆ
Updated on: 

ಮನೆಯಲ್ಲಿನ ಬೆಡ್ರೂಂ ಖಾಸಗಿ ಕೋಣೆ ಮಾತ್ರವಲ್ಲದೆ, ರಾತ್ರಿಯ ನೆಮ್ಮದಿಯ ನಿದ್ದೆಗೆ, ಜಂಜಾಟದ ಮತ್ತು ಒತ್ತಡದ ಮನಸಿಗೆ ವಿಶ್ರಾಂತಿ ನೀಡುವ ಆಶ್ರಯ ತಾಣ. ಆರಾಮದಾಯಕ ನಿದ್ರೆಗೆ ಮಾನಸಿಕ ಸ್ಥಿತಿ, ಬೆಡ್ರೂಂನ ವಿನ್ಯಾಸಗಳ ಜತೆಗೆ, ಮುಖ್ಯವಾಗಿ ನಾವು ಮಲಗುವ ಹಾಸಿಗೆಯೂ ಪ್ರಮುಖ ಕಾರಣವಾಗುತ್ತದೆ. ದಣಿದು ಬಂದು ಮಲಗಿದರೂ ಅಥವಾ ಮಲಗಿದ ನಂತರವೂ ಸುಸ್ತಾದ ಅನುಭವ ನಿಮಗಾಗುತ್ತಿದ್ದರೆಅದಕ್ಕೆ ನಾವು ಮಲಗಲು ಬಳಸುವ ಹಾಸಿಗೆಯೂ ಕಾರಣವಾಗಿರಬಹುದು.
ಉತ್ತಮ ನಿದ್ದೆಗೆ, ನೆಮ್ಮದಿಗೆ, ಆರೋಗ್ಯಕ್ಕೆ ಉತ್ತಮ ಹಾಸಿಗೆಯೂ ಅತಿಮುಖ್ಯ. ದಿನದ ಬಹುತೇಕ ಸಮಯ ನಾವು ಹಾಸಿಗೆ ಮೇಲೆ ಕಳೆಯುತ್ತಿದ್ದರೂ ಹಾಸಿಗೆ ಕೊಳ್ಳುವಾಗ ಮಾತ್ರ ಅಷ್ಟಾಗಿ ಗಮನ ಹರಿಸದೆ, ಸ್ವಲ್ಪ ಮೆತ್ತಗಿದ್ದು, ಕಣ್ಣಿಗೆ ಅಂದವಾಗಿ ಕಂಡರೆ ಅದುವೇ ಮಲಗಲು ಸೂಕ್ತ ಹಾಸಿಗೆ ಎಂದು ಖರೀದಿಸಿಬಿಡುತ್ತೇವೆ. ಆದರೆ, ಕೆಲವೊಂದು ಹಾಸಿಗೆ ಮೆತ್ತಗಿದ್ದರೂ, ಸುಖನಿದ್ದೆ ಕೊಡದೆ ಮೈಕೈ ನೋವು, ಆಲಸ್ಯ ತಲೆದೋರಿ ನೆಮ್ಮದಿ ಹಾಳಾಗುವುದು ನಿಶ್ಚಿತ. ಹಾಗಾಗಿ ಹಾಸಿಗೆ ಕೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಿ, ನಮ್ಮ ಮನಸ್ಸು, ದೇಹಕ್ಕೆ ಖುಷಿ ನೀಡುವ ಹಾಸಿಗೆಯನ್ನೇ ಖರೀದಿಸಬೇಕು.
ಚೆಂದದ ಮನೆಗೆ, ಮನಸಿಗೆ, ಸುಂದರ ದೇಹಕೆ ಎಂದಿಗೂ ಚೆಂದದ ಹಾಸಿಗೆಯಿರಲಿ...

ಹಾಸಿಗೆ ಖರೀದಿಸುವ ಮುನ್ನ

  • ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರಿರುವ ಕಂಪೆನಿಗಳ ಹಾಸಿಗೆಗಳನ್ನೇ ಖರೀದಿಸಿ. ಮಲಗೋಕೆ ಹೇಗಿದ್ರೆನು ಎಂದು ಉಢಾಪೆ ಮಾಡಿ ಸಾಧಾರಣ ಬೆಡ್ ಖರೀದಿಸಿದಿನಂಪ್ರತಿ ನಿದ್ದೆಗೆಟ್ಟು ಮೂಡ್ ಹಾಳುಮಾಡಿಕೊಳ್ಳಬೇಡಿ.
  • ಆರಾಮದಾಯಕ ಅನುಭವ ನೀಡುವ ಜತೆಗೆ ಬೆನ್ನಿಗೆ, ತಲೆಗೆ ಹಿತವೆನಿಸುವ ಬೆಡ್ ಎಂದು ಖಚಿತಪಡಿಸಿಕೊಳ್ಳಲು ನಿಮಗಿಷ್ಟವಾದ ಬೆಡ್ ಮೇಲೆ 5-10 ನಿಮಿಷ ಮಲಗಿ ಖಚಿತಪಡಿಸಿಕೊಂಡು ಖರೀದಿಸಿ.
  • ನಮ್ಮ ದೇಹದ ಉದ್ದ ಮತ್ತು ತೂಕಕ್ಕೆ ಹೊಂದಿಕೆಯಾಗುವ, ಮಲಗಿದಾಗ ಕನಿಷ್ಟ 20 ಸೆಂ.ಮೀಗೂ ಹೆಚ್ಚು ಉದ್ದ ಇರುವ, ಇಬ್ಬರು ಮಲಗುವುದಿದ್ದರೆ 160 ಸೆಂ.ಮೀಗೂ ಹೆಚ್ಚು ಅಗಲ ಇರುವ ಹಾಸಿಗೆ ಖರೀದಿಸಿದರೆ ಒಳಿತು.
  • ಹಾಸಿಗೆಯನ್ನು ಆಗಾಗ ಬದಲಿಸಲು ಸಾಧ್ಯವಿಲ್ಲವಾದ್ದರಿಂದ ಕೊಳ್ಳುವ ಮುನ್ನ ಕನಿಷ್ಠ 10 ವರ್ಷ  ಬಾಳಿಕೆ ಬರುವ ಹಾಸಿಗೆ ಖರೀದಿಸಬೇಕಾಗುತ್ತದೆ.
  • ಒತ್ತಡದ ಜೀವನದಲ್ಲಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕೂತು ಕಾರ್ಯನಿರ್ವಹಿಸುವುದು, ತಾಪಮಾನದ ಬದಲಾವಣೆ ಮತ್ತಿತರ ಸಮಸ್ಯೆಗಳಿರುವುದರಿಂದ ದೇಹದ ಆಲಸ್ಯ, ಬೆನ್ನುನೋವು ಮತ್ತಿತರ ಆನಾರೋಗ್ಯ ಕಾಡುವುದು ಮುಖ್ಯವಾಗಿ ನಾವು ಮಲಗುವ ಭಂಗಿ ಮತ್ತು ಮಲಗುವ ಹಾಸಿಗೆಯ ಗುಣಮಟ್ಟದಿಂದಲೇ ಎಂಬುದು ನೆನಪಿರಲಿ.
  • ಮಲಗುವಾಗ ರೋಮ್ಯಾಂಟಿಕ್ ಮೂಡ್, ಲುಕ್ ಬರಲು ನಮ್ಮ ಭಾವನೆಗಳಿಗೆ ಅನುಗುಣವಾಗಿ ತಿಳಿಬಣ್ಣದ, ಹೂವಿನ ಚಿತ್ತಾರವಿರುವ ಬೆಡ್, ಬೆಡ್ಶೀಟ್ ಆಯ್ಕೆಮಾಡಿಕೊಳ್ಳಿ. ಬೆಡ್ ಕಮ್ ಸೋಫಾವನ್ನು ಖರೀದಿಸಿದರೆ ಇನ್ನೂ ಉತ್ತಮ.
  • ದಿಂಬು, ಹಾಸಿಗೆ ಮೇಲೆ ರೋಸ್ ಕಲರ್, ಕೆಂಪು, ಮರೂನ್ ಇನ್ನಿತರ ಬಣ್ಣದ ಬಟ್ಟೆಯ ಹೊದಿಕೆ ಇದ್ದರೆ ಚೆನ್ನ. ಹೃದಯಾಕಾರದ ದಿಂಬುಗಳಿದ್ದರೆ ರೋಮ್ಯಾಂಟಿಕ್ ಆಗಿರುತ್ತದೆ ಮತ್ತು ನೋಡಲು ಚೆಂದ.
- ಗಣೇಶ್ ಕಮ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com