ನಮ್ಮ ಆಹಾರದಿಂದ ಸಕ್ಕರೆಯನ್ನು ಹೊರಗಿಟ್ಟರೆ ಅದರಿಂದ ದೇಹಕ್ಕೆ ಪೌಷ್ಟಿಕಾಂಶಗಳ ಯಾವ ಕೊರತೆಯೂ ಉಂಟಾಗುವುದಿಲ್ಲ ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ನಿತ್ಯ ಬಳಸುವ ಬಿಳಿ ಸಕ್ಕರೆ ರಾಸಾಯನಿಕವಾಗಿ ಸಂಸ್ಕರಿಸಿದ್ದು. ಮೂಲ ಕಬ್ಬಿನಲ್ಲಿರುವ ವಿಟಮಿನ್, ಖನಿಜ ಲವಣಗಳು, ಪ್ರೊಟೀನು ಹಾಗೂ ಇತರೆ ಪೌಷ್ಟಿಕಾಂಶಗಳೆನ್ನೆಲ್ಲ ರಾಸಾಯನಿಕವಾಗಿ ಸಂಸ್ಕರಿಸಲಾದ ಬಿಳಿ ಸಕ್ಕರೆಗೆ ಹೋಲಿಸಿದಲ್ಲಿ ಕಂದುಸಕ್ಕರೆ ಒಳ್ಳೆಯದು. ಕಂದು ಸಕ್ಕರೆಯಲ್ಲಿ ಕಬ್ಬಿಣ ಸತ್ವ ಮತ್ತು 'ಬಿ' ವಿಟಮಿನ್ ಇದೆ. ಇವು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತವೆ.
ರಾಸಾಯನಿಕವಾಗಿ ಸಂಸ್ಕರಿಸಿದ ಬಿಳಿ ಸಕ್ಕರೆಯನ್ನು ಅತಿಯಾಗಿ ಬಳಸಿದರೆ ಸಿಹಿಮೂತ್ರ ಉಲ್ಬಣಿಸುತ್ತದೆ. ಬಿಳಿ ಸಕ್ಕರೆಯ ಉಪಯೋಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೂ ಭಾಗಶಃ ಕಾರಣವಾಗಬಲ್ಲದು. ಅಷ್ಟೇ ಅಲ್ಲದೆ ಹಲ್ಲು ಹುಳುಕಿಗೂ ಕಾರಣವಾಗುತ್ತದೆ.
ಇಂಗ್ಲೆಂಡ್‌ನ ಸತ್ವಯುತ ಆಹಾರ ತಜ್ಞ ಜಾನ್‌ಯುಡ್‌ಕಿಗ್ ಅವರ ತಂಡವೊಂದು ಮನುಷ್ಯನ ದೇಹದ ಮೇಲೆ ಸಕ್ಕರೆಯ ಪರಿಣಾಮದ ಕುರಿತು ಅಧ್ಯಯನ ನಡೆಸಿ, 'ಸಿಹಿಮೂತ್ರ, ಸಂಧಿವಾತ, ಜಠರದಲ್ಲಿ ಹುಣ್ಣು, ಸಮೀಪದೃಷ್ಟಿ, ದೂರದೃಷ್ಟಿ, ಹಾರ್ಮೋನುಗಳ ಸ್ರವಿಸುವಿಕೆಯ ತೊಂದರೆ, ದುಗ್ದರಸ ಮತ್ತು ಇನ್ಸುಲಿನ್ ಹೆಚ್ಚಾಗುವುದಕ್ಕೆ ಸಕ್ಕರೆ ಕಾರಣವಾಗಬಲ್ಲದು' ಎಂದಿದೆ.
ಕೆಲವು ಪಾನೀಯಗಳನ್ನು ಪ್ರಯೋಗಕ್ಕೆ ಗುರಿಪಡಿಸಿದಾಗ ಅವುಗಳಲ್ಲಿ ಶೇ.10ರಷ್ಟು ಸಕ್ಕರೆ ಇರುವುದು ಪತ್ತೆಯಾಗಿದೆ. ಕೋಲಾ ಪಾನೀಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಾಸ್ಪಾರಿಕ್ ಆಮ್ಲವೂ ಇರುತ್ತದೆ. ಮನುಷ್ಯನ ಹಲ್ಲುಗಳನ್ನು ಕೋಲಾ ಪಾನೀಯದಲ್ಲಿಟ್ಟಾಗ ಹಲ್ಲುಗಳು ಮೆದುವಾಗಿ, ಸ್ವಲ್ಪ ಸಮಯದಲ್ಲಿ ಕರಗತೊಡಗಿದವು. ಕೋಲಾ ಪಾನೀಯಗಳಲ್ಲಿರುವ ಆಮ್ಲತೆಯ ಪ್ರಮಾಣಕ್ಕೆ ಸಮನಾಗಿದೆ. ಪಾನೀಯಗಳಲ್ಲಿರುವ ಸಕ್ಕರೆ ಈ ಆಮ್ಲತೆಯನ್ನು ಮುಚ್ಚಿಡುತ್ತದೆ. ಪಾಸ್ಪಾರಿಕ್ ಆಮ್ಲ, ಸಕ್ಕರೆ, ಕೆಫೀನ್, ಬಣ್ಣಗಳು ಮತ್ತು ರುಚಿಗಾಗಿ ಬೆರೆಸುವ ದ್ರವ್ಯಗಳನ್ನು ಕುಡಿದರೆ ದೇಹದಲ್ಲಿ ಪ್ರೊಟೀನ್ ಕೊರತೆಯೂ ಉಂಟಾಗುತ್ತದೆ.
- ಶಿವರಾಮ ಹತ್ತೊಕ್ಲಲು