ನನ್ನ ಲಿವರ್

Updated on: 

ಪಿತ್ತಜನಕಾಂಗದ (ಲಿವರ್) ಆರೋಗ್ಯ ನಿಜಕ್ಕೂ ಕಾಳಜಿ ವಿಷಯ. ಇತ್ತೀಚಿನ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ವರದಿಯ ಪ್ರಕಾರ ಭಾರತವೊಂದರಲ್ಲೇ 2 ಲಕ್ಷ ಮಂದಿಗೆ ಯಕೃತ್ತಿನ ಕಾಯಿಲೆ ಇದೆ. ಶರೀರದ ಎಲ್ಲ ಚಟುವಟಿಕೆಗಳ ಒಟ್ಟಾರೆ ಉಸ್ತುವಾರಿಯನ್ನು ಲಿವರ್ ನೋಡಿಕೊಳ್ಳುತ್ತದೆ ಎಂದರೆ ಅದರ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕಲ್ಲವೇ?
ಯಕೃತ್ತಿನಲ್ಲಿ ಖನಿಜಾಂಶಗಳು, ವಿಟಮಿನ್‌ಗಳು ಶೇಖರಣೆ ಆಗಿ ರಕ್ತಕೋಶಗಳ ರಚನೆಗೆ ಸಹಕರಿಸುತ್ತದೆ. ಶೇ.80ರಷ್ಟು ಉತ್ತಮವಾದ ಕೊಲೆಸ್ಟರಾಲ್ ಅನ್ನು ಇದು ಉತ್ಪಾದಿಸುತ್ತದೆ. ಪಿತ್ತಜನಕಾಂಗ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸಿ, ರಕ್ತ ಹೆಪ್ಪುಗಟ್ಟುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಗಾಯವಾದಾಗ ರಕ್ತ ಹರಿದು ಹೋಗುವುದನ್ನೂ ಇದು ತಪ್ಪಿಸಬಲ್ಲದು.

ವ್ಯಾಯಾಮ ಮಾಡಿ...
ಸಂತುಲಿತ ಆಹಾರ ಸೇವನೆಯ ಮೂಲಕ ಪಿತ್ತಜನಕಾಂಗದ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಯಮಿತ ವ್ಯಾಯಾಮವೂ ಅಗತ್ಯ. ಮಾದಕ ದ್ರವ್ಯಗಳ ಸೇವನೆಯಿಂದ ಹೆಪಟೈಟಿಸ್, ಯಕೃತ್ತಿನ ಕಾಯಿಲೆ, ಆಲ್ಕೋಹಾಲ್ ಸಿರೋಸಿಸ್‌ನಂಥ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮೂಲಿಕೆಗಳಿಂದ ಲಿವರ್ ಹೆಲ್ತ್
ನೈಸರ್ಗಿಕ ಆಹಾರ ಸೇವನೆ ರೂಢಿಸಿಕೊಳ್ಳುವುದು ಒಳ್ಳೆಯದು. ಉದಾಹರಣೆಗೆ ಬೆಳ್ಳುಳ್ಳಿ ಯಕೃತ್ತಿನ ಚಟುವಟಿಕೆಗೆ ತುಂಬಾ ಒಳ್ಳೆಯದು. ಯಕೃತ್ತು ಶರೀರದಿಂದ ವಿಷಯುಕ್ತ ಅಂಶಗಳನ್ನು ಹೊರಹಾಕುತ್ತದೆ. ಬೆಳಗ್ಗೆ ನಿಂಬೆ ರಸ ಕುಡಿಯುವುದರಿಂದ ಅದು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ.
ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುವ ಚಿಕೋರಿ (ಕಸಾನಿ), ಬೆನ್ಜೋಯಿಕ್ ಆಮ್ಲ ಹಾಗೂ ಹೆಪಟೊ ಪ್ರೊಆ್ಯಕ್ಟಿವ್ ಅಂಶಗಳನ್ನು ಒಳಗೊಂಡ ಕೇಪರ್ ಹಿಂಸ್ರಾ, ಬ್ಲ್ಯಾಕ್ ನೈಟ್ರೇಡ್ ಕಾಮಚಿ, ಅರ್ಜುನ ತೊಗಟೆ ಯಕೃತ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. 

ಲಿವರ್ ರಕ್ಷಣೆ ಹೇಗೆ?
-    ಡ್ರಗ್ಸ್ ಮತ್ತು ಮದ್ಯದಿಂದ ದೂರವಿರಿ.
-    ಯಥೇಚ್ಛ ನೀರು ಕುಡಿಯಿರಿ, ಸಮತೋಲನ ಆಹಾರ ಸೇವಿಸಿ.
-    ತಪ್ಪದೇ ಯೋಗ, ವ್ಯಾಯಾಮ ಮಾಡಿ.
-    ಕೆಫೀನ್ ಅಂಶವಿರುವ ಪದಾರ್ಥಗಳನ್ನು ಕಡಿಮೆ ಬಳಸಿ
-    ಸೂಕ್ತ ಚುಚ್ಚುಮದ್ದುಗಳನ್ನು ಪಡೆಯಿರಿ.
-    ವೈದ್ಯರು ಹೇಳಿದ್ದಕ್ಕಿಂತ ಹೆಚ್ಚಿಗೆ ಔಷಧಿಗಳನ್ನು ತೆಗೆದುಕೊಳ್ಳಬೇಡಿ.
-    ಲಿವರ್ ಫಂಕ್ಷನ್ ಟೆಸ್ಟ್ ಮಾಡಿಸಿಕೊಳ್ಳಿ.
-    ರಾಸಾಯನಿಕಗಳು ಹಾಗೂ ಇತರೆ ಮಾಲಿನ್ಯವನ್ನುಂಟು ಮಾಡುವ ವಸ್ತುಗಳಿಂದ ದೂರವಿರಿ.

- ಡಾ. ರಂಗೇಶ್ ಪರಮೇಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com