

ಇದು ಚೀನಾ ಮೂಲದ ಚಿಕಿತ್ಸಾ ಪದ್ಧತಿ. ಇಲ್ಲಿ ದೇಹದ ನಿರ್ದಿಷ್ಟ ಭಾಗಗಳಿಗೆ ಬೆಳ್ಳಿ ಅಥವಾ ಬಂಗಾರದ ಸೂಜಿಗಳನ್ನು ಚುಚ್ಚಿ ರೋಗವನ್ನು ಗುಣಪಡಿಸಲಾಗುತ್ತದೆ. ಶರೀರದ ಸಾವಿರಾರು ಬಿಂದುಗಳನ್ನು 12 ಮುಖ್ಯ ಮಾರ್ಗ ರೇಖೆಗಳಿಂದ ಗುರುತಿಸಿ, ಸೂಜಿ ಚುಚ್ಚುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. 'ನೋವು ನಿವಾರಣೆಗೆ ಈ ವಿಧಾನ ಅತಿ ಸೂಕ್ತ' ಎಂದು ಚೀನಿಯರು ಇಂದಿಗೂ ನಂಬಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಸೂಕ್ತ ಖಾಸಗಿ ಚಿಕಿತ್ಸಕರು ಸಿಗುವುದೂ ಕಷ್ಟವಾದ್ದರಿಂದ ಈ ಚಿಕಿತ್ಸೆ ಅಷ್ಟು ಪ್ರಸಿದ್ಧಿ ಪಡೆದಿಲ್ಲ. ಅಲ್ಲದೆ, ಒಂದು ರೋಗಿಗೆ ಚುಚ್ಚಿದ ಸೂಜಿಗಳನ್ನೇ ಮತ್ತೊಂದು ರೋಗಿಗೂ ಬಳಸಿದರೆ ಎಚ್‌ಐವಿ, ಹೆಪೆಟೈಟಿಸ್‌ನಂಥ ಸೋಂಕು ಹರಡುವ ಸಾಧ್ಯತೆ ಇದ್ದು, ಹೆಚ್ಚಿನ ನಿಗಾ ಅಗತ್ಯ.