ಪಂಚೇಂದ್ರಿಯಗಳಲ್ಲಿ ಕಿವಿಯೂ ಒಂದು. ಕಿವಿಗೆ ಸಂಬಂಧಿಸಿದಂತೆ ವೈದ್ಯಕೀಯ ವಿಜ್ಞಾನ ಅಗಾಧವಾಗಿ ಬೆಳೆದಿದೆ. ಅನೇಕ ಪರೀಕ್ಷೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಆಡಿಯೋಮೆಟ್ರಿ ಕೂಡ ಒಂದು. ಕಿವಿ ಕೇಳಿಸಿಕೊಳ್ಳುವ ಶಕ್ತಿ ಕುಂದಿದ್ದರೆ ಅದನ್ನು ಪರೀಕ್ಷಿಸುವ ವಿಧಾನವೇ ಆಡಿಯೋಮೆಟ್ರಿ. ಈ ಪರೀಕ್ಷೆಯಲ್ಲಿ ವಿಶೇಷ ಉಪಕರಣಗಳನ್ನು ಬಳಸಿಕೊಂಡು ಕಿವಿ ಯಾವ ಶಬ್ದ ಸಂಜ್ಞೆಗಳನ್ನು ಗ್ರಹಿಸುತ್ತದೆ ಎಂದು ಗ್ರಾಫ್ ಮೂಲಕ ತಿಳಿದುಕೊಳ್ಳಲಾಗುತ್ತದೆ. ಆಡಿಯೋಮೆಟ್ರಿ ಪರೀಕ್ಷೆ ನಂತರವೇ ವೈದ್ಯರು ಅಗತ್ಯ ಚಿಕಿತ್ಸೆ ನೀಡಲು ಸಾಧ್ಯ.