ಬೆನ್ನ ಕೆಳಗೆ ಯಾಕೆ ಚುಳ್ ಅಂತಿದೆ?

ಬೆನ್ನ್ನಿನ ಕೆಳಭಾಗದ ನೋವು, ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಕಾಡುವಂಥದ್ದು. ಹೆಚ್ಚಿನ ಸಂದರ್ಭಗಳಲ್ಲಿ ಈ ನೋವು ಹಲವು ದಿನಗಳಿಂದ ಹಲವು ವಾರಗಳವರೆಗೆ ಇರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇನ್ನೂ ಹೆಚ್ಚು ಕಾಲ ಇರಬಹುದು ಮತ್ತು ಮರುಕಳಿಸಬಹುದು. ನಿಧಾನವಾಗಿ ಹೆಚ್ಚುತ್ತ ಹೋಗಿ ದೀರ್ಘಕಾಲದವರೆಗೆ ಸಮಸ್ಯೆ ಉಂಟುಮಾಡಬಹುದು.
ಸಂಕೀರ್ಣ ಸಂರಚನೆ ಬೆನ್ನಿನದು. ಮೆದುಹಾಸಿಗೆಯಂತೆ ಬೆಂಬಲ ನೀಡುವಂಥ ಶಾಕ್ ಅಬ್ಸಾರ್ಬರ್ ಡಿಸ್ಕ್ಗಳಿಂದ ಕೂಡಿದ 24 ಮೂಳೆ, ಈ ಮೂಳೆಗಳನ್ನ್ನು ಹಾಗೂ ಡಿಸ್ಕ್ಗಳನ್ನು ಹಿಡಿದಿಡಲು ಮೂಳೆಕಟ್ಟು (ಅಸ್ಥಿರಜ್ಜು), ಮೂಳೆಗಳಿಗೆ ಮಾಂಸಖಂಡಗಳನ್ನ್ನು ಜೋಡಿಸಲು ಸ್ನ್ನಾಯುರಜ್ಜು, ಬೆನ್ನುಹುರಿ ಹಾಗೂ ನರಗಳು ಮತ್ತು ಮಾಂಸಖಂಡಗಳಿಂದ ಬೆನ್ನ್ನಿನ ಕೆಳಭಾಗವಾದ ಸೊಂಟದ ಪ್ರದೇಶವು ಔ1, ಔ2, ಔ3, ಔ4 ಮತ್ತು ಔ5 ಎನ್ನುವ 5 ಮೂಳೆಗಳಿಂದ ಕೂಡಿದೆ. ಈ ಭಾಗವೇ ದೇಹದ ಮೇಲ್ಭಾಗದ ಸಂಪೂರ್ಣ ಭಾರ ಹೊರುತ್ತದೆ. ಆದ್ದರಿಂದ, ಬಾಗುವಾಗ, ತಿರುಗುವಾಗ, ಆಡುವಾಗ ಮತ್ತು ಎತ್ತುವಾಗ ನಿರಂತರ ಒತ್ತಡದಲ್ಲಿರುತ್ತದೆ.
ಕಾರಣಗಳು
ಹೆಚ್ಚಿನ ಕೆಳಭಾಗದ ಬೆನ್ನಿನ ನೋವುಗಳಿಗೆ ಕಾರಣಗಳು ತಿಳಿದಿರುವುದಿಲ್ಲ. ಏಕೆಂದರೆ ಅದು ಗಂಭೀರವಾದ ಹಾನಿ ಅಥವಾ ಕಾಯಿಲೆಯಿಂದಉಂಟಾದದ್ದಲ್ಲ, ಬದಲಾಗಿ ಉಳುಕು, ಸ್ನಾಯು ಉಳುಕು, ಸಣ್ಣಪುಟ್ಟ ಗಾಯ ಅಥವಾ ಒತ್ತಿದ ಅಥವಾ ತೊಂದರೆಗೊಳಗಾದ ನರದಿಂದ ಉಂಟಾದವುಗಳು. ಗರ್ಭಧರಿಸುವ ಸಮಯದಲ್ಲಿ ಅಥವಾ ಒತ್ತಡದಿಂದ, ವೈರಾಣು ಸೋಂಕಿನಿಂದ, ಮೂತ್ರಪಿಂಡದ ಕಾಯಿಲೆಯಿಂದ ಅಥವಾ ನಿದ್ರಾದೋಷದಿಂದ, ಸರಿಯಾಗಿರದ ಕೂರುವ-ನಿಲ್ಲುವ ಮಲಗುವ ಭಂಗಿಗಳಿಂದಲೂ ಉಂಟಾಗಬಹುದು.
ದಿನನಿತ್ಯದ ಚಟುವಟಿಕೆ -ನಾಜೂಕಿರದೆ ಬಾಗುವುದು, ಎತ್ತುವುದು, ತಿರುಗುವುದು, ಕೆಮ್ಮುವುದು, ಸೀನುವುದು, ಸ್ನಾಯುಗಳ ಬಿಗಿತ, ವಿಪರೀತವಾಗಿ ಚಾಚುವುದು ಅಥವಾ ವಿಶ್ರಾಂತಿಯಿರದೆ ದೀರ್ಘಕಾಲ ವಾಹನ ಚಾಲನೆ. ಮನೆಯಲ್ಲಿ, ಕೆಲಸದಲ್ಲಿ ಅಥವಾ ವಾಹನ ಚಲಿಸುವಾಗ ಅಪಘಾತಗಳೂ (ಇದ್ದಕ್ಕಿದ್ದ ಹಾಗೆ ಬ್ರೇಕ್ ಹಾಕುವುದರಿಂದ ಆಗುವಂಥ ಸೆಳೆತ) ಸಾಮಾನ್ಯ ಕಾರಣಗಳು.
1. ಸ್ಲಿಪ್ ಡಿಸ್ಕ್
ಗಂಭೀರವಾದ ಬೆನ್ನ್ನುನೋವಿನ ಅತ್ಯಂತ ಸಾಮಾನ್ಯ ರೂಪ. ಬೆನ್ನುಹುರಿಯ ಎರಡು ಡಿಸ್ಕ್ಗಳಲ್ಲಿ ಒತ್ತಡ ಹೆಚ್ಚಾಗಿ ಸ್ಲಿಪ್ ಡಿಸ್ಕ್ ಆಗಲು ಅತಿಮುಖ್ಯ ಕಾರಣ. ಒಂದು ಅಥವಾ ಹೆಚ್ಚಿನ ಬೆನ್ನಿನ ಮೂಳೆಗಳು ಊದಿಕೊಳ್ಳುವುದರಿಂದ ಅಥವಾ ಬಿರಿಯುವುದರಿಂದ ಉಂಟಾಗಿ, ಒಳಗಿನ ಜೆಲ್ಲಿಯಂಥ ವಸ್ತು, ಡಿಸ್ಕ್ಗಳ ಪಕ್ಕ ಹಾದುಹೋಗುವ ಬೆನ್ನುಹುರಿಯನ್ನ್ನು ಅಥವಾ ನರಗಳ ಬೇರುಗಳನ್ನು ಒತ್ತುತ್ತದೆ. ಇದನ್ನು ಸಾಮಾನ್ಯವಾಗಿ ಜಾರಿದ ಡಿಸ್ಕ್ / ಊದಿಕೊಂಡ ಅಥವಾ ಬಿರಿದ ಡಿಸ್ಕ್ ಎನ್ನುತ್ತಾರೆ; ಇದರಿಂದ ಬೆನ್ನು ನೋವಾಗುವುದಲ್ಲದೆ, ಸಯಾಟಿಕ್ ಎಂಬ ನರದ ಉರಿತದಿಂದ ನಿತಂಬಗಳಲ್ಲಿ, ತೊಡೆಗಳಲ್ಲಿ ಮತ್ತು ಕಾಲುಗಳಲ್ಲಿ ನೋವು ಅಥವಾ ಉರಿಯುವಂಥಅನುಭವವಾಗುತ್ತದೆ.
2. ವಯಸ್ಸಾದಾಗ
ವಯಸ್ಸಾಗುತ್ತಿದ್ದಂತೆ ಅಥವಾ ಅಪಘಾತದ ನಂತರ ಸಾಮಾನ್ಯವಾಗಿ ಡಿಸ್ಕ್ನಲ್ಲಿ ದ್ರವಾಂಶ ಕಡಿಮೆಯಾಗಿ ಸವೆತ ಶುರುವಾಗುತ್ತದೆ. ಇದರಿಂದ ಡಿಸ್ಕ್ನ ಬಾಗುವಿಕೆ ಸಾಮರ್ಥ್ಯ ಕಡಿಮೆಯಾಗಿ, ಬೆನ್ನೆಲುಬಿಗೆ ಮೆತ್ತೆ ಒದಗಿಸುವುದೂ ಕಡಿಮೆಯಾಗುವುದರಿಂದ, ಮೂಳೆಗಳ ಸವೆತವಾದ ಹಿರಿಯ ವಯಸ್ಕರಲ್ಲಿ ನೋವು ತರುತ್ತದೆ.
ಹಿರಿಯರಲ್ಲಿ ಬೆನ್ನುನೋವು ಕಾಣಿಸಲು ಅತಿಮುಖ್ಯ ಕಾರಣಗಳು:
ಅ) ಆಸ್ಟಿಯೋಪೋರೋಸಿಸ್:
ಹೀಗೆಂದರೆ ಮೂಳೆಸವೆತ. ಅತಿಸಣ್ಣ ಫ್ರ್ಯಾಕ್ಚರ್ (ಮೈಕ್ರೋಫ್ರ್ಯಾಕ್ಚರ್) ಮತ್ತು ಕುಸಿದುಬೀಳುವುದಕ್ಕೆ ಕಾರಣವಾಗುವುದು. ಇದನ್ನು ದೀರ್ಘಕಾಲ ಹಾಗೇ ಬಿಟ್ಟರೆ ಹಿರಿಯರಲ್ಲಿ ಕಾಣುವಂತೆ ಗೂನುಬೆನ್ನು ಆಗುತ್ತದೆ.
ಆ) ಬೆನ್ನುಮಣಿಯ ಸುತ್ತಮುತ್ತಲಿರುವ ಪುಟ್ಟ ಜಾಯಿಂಟ್ಗಳ ಕೀಲುವಾತ (ಆರ್ಥರೈಟಿಸ್)
ಇ) ಕ್ಯಾನ್ಸರ್ ಸುತ್ತಮುತ್ತ ಹರಡಿದಾಗ (ಮೆಟಾಸ್ಟಾಸಿಸ್):
ರಾತ್ರಿಯ ಹೊತ್ತು, ಎರಡುವಾರಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ಅತಿಯಾದ ಬೆನ್ನುನೋವು ಕಾಣುತ್ತಿದ್ದು, ಜೊತೆಗೆ ತೂಕದಲ್ಲಿಯೂ ಇಳಿತ ಇದ್ದಾಗ.
ಚಿಕಿತ್ಸೆಗೆ ಮಾರ್ಗ
ಬೆನ್ನ್ನುನೋವನ್ನು ತಡೆಗಟ್ಟಲು ಬೆನ್ನ್ನಿಗೆ ಅಧಿಕ ಒತ್ತಡ ಹಾಕಿ ಅದನ್ನು ಬಿಗಿಗೊಳಿಸುವಂತಹ ಕೆಲಸಗಳನ್ನು ಕಡಿಮೆ ಮಾಡಬೇಕು. ಬೆನ್ನು ಬಲಿಷ್ಠವಾಗಿ ದೃಢವಾಗಿರುವುದನ್ನ್ನು ಖಚಿತಪಡಿಸಿಕೊಳ್ಳಬೇಕು. ಅಪರೂಪದ ಗಂಭೀರ ಪರಿಸ್ಥಿತಿಗಳಲ್ಲಿ, ಮುಂಚಾಚಿದ ಅಥವಾ ಹರಿದ ಡಿಸ್ಕ್ನ ಸರಿಪಡಿಸುವಿಕೆಗೆ ಶಸ್ತ್ರಚಿಕಿತ್ಸೆ ಅವಶ್ಯವಾಗಬಹುದು. ಭಾರವನ್ನು ಏಕಾಏಕಿ ಎತ್ತುವುದರಿಂದ, ಅಂಗಡಿ ಷಟರ್ ಎಳೆವ ಸಂದರ್ಭದಲಿ,್ಲ ಟ್ರ್ಯಾಕ್ಟರ್ ಮೇಲೆ ಹೆಚ್ಚಾಗಿ ಸಂಚರಿಸುವುದರಿಂದ ಸಹ ಬೆನ್ನ್ನುನೋವು ಕಂಡು ಬರಬಹುದು.
ಬೆನ್ನುನೋವಿದ್ದಾಗ ಟಿಪ್ಸ್
ಸಂದೇಹಿತ ಡಿಸ್ಕ್ ಸಮಸ್ಯೆಗಳಿಗೆ, ಹೆಚ್ಚು ನಿಖರವಾದ ಮಾಹಿತಿ ಪಡೆಯಲು, ಕ್ಷ-ಕಿರಣ, ಸಿಟಿ ಸ್ಕ್ಯಾನ್, ಎಮ್ಆರ್ಐ ಬೇಕಾಗಬಹುದು.
ಸಾಧ್ಯವಾದೆಡೆಯಲ್ಲೆಲ್ಲಾ ಸಾಮಾನ್ಯ ಚಟುವಟಿಕೆಗಳನ್ನ್ನು ಮುಂದುವರಿಸಿ.
ಅಲ್ಪ ಪ್ರಮಾಣದ ನೋವಿಗೆ ಚಟುವಟಿಕೆಯಿಂದಿರುವುದು, ಫಿಸಿಯೋಥೆರಪಿ ಸಾಕು.
ಎರಡು ದಿನಗಳಿಗಿಂತ ಹೆಚ್ಚಿಗೆ ಹಾಸಿಗೆ ಮೇಲೆ ವಿಶ್ರಮಿಸಬೇಡಿ. ಹೆಚ್ಚು ಆರಾಮ ವ್ಯತಿರಿಕ್ತ ಪ್ರಭಾವಬೀರುತ್ತದೆ.
ಮಾಂಸಖಂಡ ಬಲಗೊಳಿಸಲು ಮತ್ತು ನಿಲುವನ್ನು ಸುಧಾರಿಸಿಕೊಳ್ಳಲು ವ್ಯಾಯಾಮ ಮಾಡಿ.
ಇನ್ಫ್ರಾರೆಡ್ ಬೆಳಕು ಅಥವಾ ಬಿಸಿಯ ಪ್ರಯೋಗ ನೋವನ್ನು ಕಡಿಮೆ ಮಾಡಬಹುದು.
ನಿಯಮಿತವಾಗಿ ವ್ಯಾಯಾಮ ಮಾಡಿ (ನಡಿಗೆ, ಈಜು, ಮತ್ತು ಯೋಗ)
ಉರಿಯೂತವನ್ನ್ನು ಕಡಿಮೆ ಮಾಡಲು, ಶೀತ ಚೀಲ (ಕೋಲ್ಡ್ ಬ್ಯಾಗ್-ಒಂದು ಟವಲ್ನಲ್ಲಿ ಸುತ್ತಿಟ್ಟ ಶೈತ್ಯೀಕರಿಸಿದ ಬಟಾಣಿ) ಉಪಯೋಗಿಸಿ.
ಮಾಂಸಖಂಡಗಳ ನೋವನ್ನು ಕಡಿಮೆ ಮಾಡಲು, ಹೀಟ್ ಪ್ಯಾಕ್ (ಹೀಟಿಂಗ್ ಪ್ಯಾಡ್ ಅಥವಾ ಬಿಸಿನೀರಿನ ಶವರ್) ಉಪಯೋಗಿಸಿ.
ಬೆನ್ನುನೋವು ನಿರಂತರವಿದ್ದಾಗ
ನಿರಂತರ ಮರುಕಳಿಸುವ ಬೆನ್ನು ನೋವಿನಿಂದ ನರಳುವವರು ಕೆಳಕಂಡ ಸಲಹೆಗಳನ್ನು ಗಮನಿಸಿ.
ಅಧಿಕ ತೂಕವನ್ನ್ನು ಕಳೆದುಕೊಳ್ಳಿ. ನಿಮ್ಮ ಬೆನ್ನು ಮತ್ತು ಉದರದ ಮಾಂಸಖಂಡಗಳನ್ನು ಬಲಿಷ್ಠಗೊಳಿಸಲು ವ್ಯಾಯಾಮ ಮಾಡಿ.
ಉತ್ತಮ ದೇಹ ನಿಲುವು ಅಭ್ಯಾಸ ಮಾಡಿಕೊಳ್ಳಿ.
ಸೂಕ್ತವಾದ ಹಾಸಿಗೆ ಮತ್ತು ಹೊದಿಕೆ ಆರಿಸಿಕೊಳ್ಳಿ.
ತಕ್ಷಣದ ಒತ್ತಡ ಅಥವಾ ಮಾಂಸಖಂಡಗಳ ಬಿಗಿಯನ್ನು ತಡೆಗಟ್ಟಿ.
ಒತ್ತಡ, ಆತಂಕ ಮತ್ತು ಕಾತರ ಕಡಿಮೆ ಮಾಡಿಕೊಳ್ಳಿ.
ವರ್ಟಿಬ್ರ
ಒಂದರ ಮೇಲೆ ಒಂದು ಸರಪೋಣಿಸಿದಂತೆ 24 ಸಣ್ಣ ಮೂಳೆಗಳು, ಮತ್ತು ಸ್ಯಾಕ್ರಮ್ ಮತ್ತು 'ಬಾಲ'ದ ಮೂಳೆ. ಕತ್ತಿನಲ್ಲಿ ಏಳು, ಬೆನ್ನಿನಲ್ಲಿ ಎದೆಗೂಡಿಗೆ ಅಂಟಿದಂತೆ 12, ಬೆನ್ನ್ನಿನ ಕೆಳಭಾಗದಲ್ಲಿ 5. ಪ್ರತಿ ವರ್ಟಿಬ್ರದ ನಡುವೆ ಉದ್ದಿನ ವಡೆಯಲ್ಲಿ ಇರುವ ರಂಧ್ರದಂತೆ (ಆದರೆ ಅತಿ ಚಿಕ್ಕದಾಗಿ) ತೆರೆದ ಭಾಗವಿರುತ್ತದೆ. ಈ ತೂತಿನಿಂದ ಬೆನ್ನ್ನುಹುರಿಯ ಕಾಲುವೆ ಇದ್ದು ಅದು ಬೆನ್ನುಹುರಿ ಮತ್ತು ನರಗಳ ಬೇರುಗಳನ್ನ್ನು ಸಂರಕ್ಷಿಸುತ್ತದೆ.
-ಡಾ. ರವೀಂದ್ರ ಪಿ.
ಕನ್ಸಲ್ಟೆಂಟ್ ಆರ್ಥೋಪಿಡಿಕ್ ಸರ್ಜನ್
ಸ್ಪರ್ಶ್ ಆಸ್ಪತ್ರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


